ನನ್ನಮ್ಮ…!

ಇದ್ದಾಳೆ…, ಇದ್ದಾಳೆ ನನ್ನಮ್ಮ,

ಒಳಗೆ ಇಣುಕಿದರೆ ಅಲ್ಲಿ ನನ್ನ

ಮಸ್ತಿಷ್ಕದೊಳಗೆ, ಹರಿವಳು ಮತ್ತೆ

ರುಧಿರವಾಗಿ ನನ್ನ ನರ ನಾಡಿಗಳೊಳಗೆ

ಒಳ-ಹೊರಗೂ ಆಕೆಯದೇ ಬಿಂಬ.

 

ಹೊರಗೆ ಅಂಗಳದಲಿ ಸೇವಂತಿಗೆ,

ಡೇರೆ ಹೂವ  ಪಟ್ಟೆಯಲಿ ಅಲ್ಲೇ ತುಳಸಿ

ಕಟ್ಟೆ, ಮಲ್ಲಿಗೆ ಬಳ್ಳಿಯ ಆಜೂಬಾಜಿನಲಿ.

ಕೊಟ್ಟಿಗೆಯ ಗಂಗೆ, ತುಂಗೆ, ಕಾವೇರಿಯರ

ಸಂಗಮದಲಿ ಮತ್ತೆ ನನ್ನ ಮನದ ಭಾವಕೋಶದಲಿ.

 

ಅಲ್ಲಿ ಅಡಕೆ ತೋಟದ ಹೆಗ್ಗಾದಿಗೆಯ

ಅಕ್ಕಪಕ್ಕದಲಿ, ಗದ್ದೆ-ಬ್ಯಾಣದ

ಬದುಗಳಲಿ…, ಎಲ್ಲಿ ಹುಡುಕಿದರಲ್ಲಿ

ಕೊನೆಗೆ ದೇದೀಪ್ಯಮಾನವಾಗಿ ಉರಿವ

ನನ್ನೆದೆಯ ಜೀವ ಚೈತನ್ಯದೊಳು.

-ಹೊಸ್ಮನೆ ಮುತ್ತು.

Leave a Reply