ನಮ್ಮವರು

ನಮ್ಮವರು

ಅಳೆದು, ತೂಗಿ
ಮೀನ – ಮೇಷದಿಂದ,
ಹಿಂದೆ – ಮುಂದೆ ನೋಡುತ್ತಾ
ಆಡಲೋ ಬೇಡವೋ
ಎಂದು ತಡೆತಡೆದು
ಒಂದೊಂದೇ ಪದ
ಪೋಣಿಸಿ ಮಾತಾಡುವುದು
ನನಗೆ ಸೇರುವುದಿಲ್ಲ…

ಏಕೆಂದರೆ …

ಹಾಗೆ ಮಾಡಬೇಕಾಗಿ
ಬಂದಾಗ ಎದುರಿಗೆ
“ನಮ್ಮವರೆನಿಸಿ-
ಕೊಂಡವರು
ಇರುವದಿಲ್ಲ…
ಹಾಗೂ
ನಮ್ಮ ಮಾತು
ನಮ್ಮವಾಗಿರುವದಿಲ್ಲ!

ಮನದ ಚಡಪಡಿಕೆಯ
ಮುಕ್ತ ದಾರಿಯಾಗಿರಬಹುದು…

ಹಾಗೆಯೇ

ಬರೆದ ಸಾಲುಗಳೆಲ್ಲ
ಕವನವಾಗಬೇಕಿಲ್ಲ…
ಮನದ ತೆವಲಿಗೆ
ಕಂಡುಕೊಂಡ
ಪರ್ಯಾಯ
ರೂಪವಾಗಿರಲೂ-
ಬಹುದು…

Leave a Reply