ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತ

ಕೊಟ್ಟೆ ಚೆಲುವ ಅಂದ ಮೊಗ ದೇವ ಎನಗೆ
ಹಾಕಿದೆ ನಾ ಹಲವು ಮುಖವಾಡ ಅದಕೆ
ಕೈಯ ಕೊಟ್ಟೆ ಪರರುಪಕಾರಕೆ
ದಾನ ಧರ್ಮ ಸಹಕಾರಕೆ
ಎತ್ತಿದೆನಲ್ಲ ನಾ ಪರರ ನಿಂದನೆಗೆ
ಸರಿದಾರಿ ತಿಳಿಯಲು ಮೆದುಳಿಗೆ ಮತಿಯನಿಟ್ಟೆ
ಬಳಸಿದೆ ನಾ ಸ್ವಾರ್ಥ ಮನೋಭಾವನೆಗೆ
ಜಿವ್ಹೆ ನೀಡಿದೆ ಹಿತವನೇ ನುಡಿಯಲು
ನಾನಾದೆ ವಾಚಾಳಿಯಂತೆ
ಓ ಮಾಧವ ಅಂಧರಲಿ ನ್ಯಾಯದೇವತೆ ಇಟ್ಟು
ಕೈಯಿಲ್ಲದವರಲಿ ಕಾಯಕವ ತೋರಿ
ಬಾಯಿಲ್ಲದವರಲಿ ಸದ್ಭುದ್ದಿಯ ಕೊಟ್ಟು
ಮುಗಿಸಲು ಕೈಂಕರ್ಯವ
ವಜ್ರದ ದೇಹವ ನೀ ಕೊಟ್ಟೆ
ಸರ್ವಾಂಗಗಳಲ್ಲೂ ಶಕ್ತಿ ಕೊಟ್ಟು ಸಲಹಿದರೂ
ಮತಿಹೀನಳಾದೆ ಎನಗೆ ತಿಳಿಯದೆ
ಮಾಧವ ಎನ್ನ ಹೃದಯ ಮಂದಿರದಲ್ಲೆ
ಇರುವ ನಿನ್ನ ಗುರುತಿಸದಾದೆ
ನಿನ್ನವಮಾನಿಸದಂತೆ ಹೃದಯವಂತಿಕೆ ಕೊಡು
ಪ್ರಾಯಶ್ಚಿತ್ತವಾಗ ಬೇಕೆನಗೆ
ಎನ್ನ ಕಣ್ಣು, ಕಿವಿ, ನಾಲಿಗೆಯಲಿ
ಸದಾ ಹೃದಯ ಬಡಿತದಲಿ
ಕೊನೆಯುಸಿರಿನಲ್ಲೂ ನೀನಿರುವಂತೆ ಮಾಡು
ಅದೇ ನನ್ನ ಪ್ರಾಯಶ್ಚಿತ್ತ

Leave a Reply