ಏನ ಬರೆಯಲಿ ಎಲ್ಲ ಬರೆದಾಗಿದೆ,
ಮುಂದಿನ ಕೋಟಿ ಯುಗಕ್ಕಾಗುವಷ್ಟು,
ಬರೆದದ್ದು ಓದದೇ……………….. ಹೋಗಿಬಿಟ್ಟರೆ,
ಜೀವಂತ ಹಡೆದರೂ ಹೋದ ಮಗುವಿನಂತೆ,
ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ,
ಬರೆದವನಿಗೂ ವಾಚಕನಿಗೂ ಹಿಂಸೆ,
ಹಾಗೆಂದು ಸುಮ್ಮನಿರಲು ಭಾಷೆ ಬಿಡದಲ್ಲಾ,
ವಿಚಾರಗಳ ಸಂತೆಯಲಿ,
ಬಡಬಡಿಕೆಯ ವ್ಯಾಪಾರ,
ಮೌನವಂತೂ ಬಹು ತುಟ್ಟಿ,
ಅದಕೆಂದೇ ಬರೆದು’ಬಿಡು’ವೆ, ನೀ ಓದಿ ‘ಬಿಡು,’
ಇಬ್ಬರೂ ಬಿಟ್ಟು ನೋಡೋಣ
ಭಾಷೆ ಹೇಗೆ ಓಡುತ್ತದೆಂದು,
ಕೊನೆಗೆ ನೀನೂ ಬರೆದು ’ಬಿಡು’
ನಾನೂ ಓದಿ ’ಬಿಡುವೆ’.
ಬಿಟ್ಟು ಹಿಡಿದು ಬಿಟ್ಟು ಹಾರಿಸುವ
ಕನ್ನಡದ ಬಾವುಟ,
ಜೈ ಭಾರತ ಜನನಿಯ ತನುಜಾತೆ,
ಜೈ ಹೇ ಕರ್ನಾಟಕ ಮಾತೆ.
ಬರಿದಾಗದ ಬರಹ
One comment
You must be logged in to post a comment.
ಏನ ಬರೆಯಲಿ ಎಲ್ಲ ಬರೆದಾಗಿದೆ,
ಮುಂದಿನ ಕೋಟಿ ಯುಗಕ್ಕಾಗುವಷ್ಟು,
ಬರೆದದ್ದು ಓದದೇ……………….. ಹೋಗಿಬಿಟ್ಟರೆ….
ಅಂತರ್ಜಾಲದದಿಂದ ಜನರು ಕ್ಷಿಪ್ರವಿಧಾನ ಹಾದಿ ಹಿಡಿದು ಓದಲು ನೋಡುತ್ತಾರೆ….. ಅವರಿಗೆ ಕ್ಷಿಪ್ರವಿಧಾನ ದಿಂದ ಒಳ್ಳೆಯ ಸಾಹಿತ್ಯ ಓದಲು ಅನುವು ಮಾಡಿಕೊಡುವ ಪ್ರಯತ್ನ ನಮ್ಮದಾಗಬೇಕು …