ಬೇಸರಿಸದ ನೀವು ಧನ್ಯ.
ಹುಟ್ಟು ಯಾರಿಂದಲೋ
ಬೆಳೆಯುವಿರಿ ಮತ್ತೆಲ್ಲೋ
ಉಣಿಸುವಳು ಭೂತಾಯಿ
ನೀರೆರೆವುದು ಬಾನು
ಉಸಿರಾಗುವುದು ವಾಯು
ಆದರೂ ನೀನೆಷ್ಟು ನಿಸ್ವಾರ್ಥಿ ಹಸಿರೆ!
ಬೆಳೆವಾಗ ಬಿಸಿಲಲ್ಲಿ ತಂಪು ಗಾಳಿ
ವಿಶಾಲ ಹರಡಿರಲು ನೆರಳು
ಜೀವಿಗಳಿಗೆ ನೀನಿರದೆ ಉಸಿರಿಲ್ಲ
ನೀನಿರದೆ ಇಳೆಗೆ ಮಳೆ-ಬೆಳೆಗಳಿಲ್ಲ
ಆದರೂ ನಿನಗೆ ಪ್ರಶಂಸೆಗಳ ಹಂಗಿಲ್ಲ
ನೀನರಷ್ಟು ನಿಸ್ವಾರ್ಥಿ ಹಸಿರೆ
ನಿನ್ನೊಳಗೆ ನೀ ಆಹಾರ ಸೃಷ್ಟಿಸಿ
ಎಲೆಗಳನುದುರಿಸಿ ಗೊಬ್ಬರವಾಗಿಸಿ
ನಿನ್ನ ನೀ ಕಾಯುವ ಸ್ವಾವಲಂಬಿ
ಭೇದ ಭಾವವಿಲ್ಲದೆ ನೀಬೆಲ್ಲವ ನೀಡುವೆ
ಏನೂ ನೀಡದ ಮನುಜ ಜನ್ಮ
ಸ್ವಾರ್ಥದಲಿ ಅಳಿಸುತಿಹ ನೀ ಅವನ ಕ್ಷಮಿಸುವೆ ನೀನೆಷ್ಟು ನಿಸ್ವಾರ್ಥಿ!
– ಉಮಾ ಭಾತಖಂಡೆ.
You must log in to post a comment.