ಭಗ್ನ – ಧೂಳು – ಪುಡಿಪುಡಿ – ದೊಡ್ಡಮುಳ್ಳು

ಭಗ್ನ – ಧೂಳು – ಪುಡಿಪುಡಿ – ದೊಡ್ಡಮುಳ್ಳು

“ಅವನು ಬರುತ್ತಾನೆ, ಬಂದೇ ಬರುತ್ತಾನೆ…
ಬರಲೇಬೇಕು….ಇಲ್ಲದಿದ್ದರೆ ಅಪ್ಪನ ಬೆವರು
ಅಮ್ಮನ ಕರುಳು ಎರಡಕ್ಕೂ ಅವಮಾನ…
ಅವನು ಕರುಳಿಗ..
ಹಾಗೆಲ್ಲ ನಂಬಿದವರ ಕನಸುಗಳನ್ನು
ಭಗ್ನಗೊಳಿಸಿ ಪುಡಿಪುಡಿಯಾಗಲು
ಬಿಡುವನಲ್ಲ.. ..
ಸಣ್ಣವನಿದ್ದಾಗಲೇ ಮುಖ ಮುಚ್ಚಿ
ಅತ್ತಂತೆ ಮಾಡಿದರೆ ಕೈ ತೆಗೆದು
ನಕ್ಕು ತೋರಿಸುವವರೆಗೂ
ತಾನೂ ಅತ್ತೇಬಿಡುವ ಹೆಂಗರುಳಿಗ..”

ಎಂದೋ “ಕೈಬಿಟ್ಟು” ಹೋದ
ಮಗನ ಧೂಳುತುಂಬಿದ ಕೋಣೆಯಲ್ಲಿ
ನೆನಪುಗಳು ಜಾಡುಗಟ್ಟಿ ಗಡಿಯಾರದ
ದೊಡ್ಡ, ಚಿಕ್ಕ ಎರಡೂ ಮುಳ್ಳುಗಳ
ಉಸಿರುಕಟ್ಟಿಸಿ, ಇದೀಗ ಆ ಮುದಿ ತಾಯಿಯ
ಕಣ್ಣುಗಳ ಕನಸುಗಳಿಗೇ
ಲಗ್ಗೆ ಹಾಕಲು ಹೊಂಚು ಹಾಕಿರುವ
ಕಾಲನ ಕಾಲು ಜಗ್ಗಿ ನಿಲ್ಲಿಸುವವರಾರಿದ್ದಾರು..????????

Leave a Reply