ಶಬ್ದಗಳಿಗೆ ಜೀವ ಬರಲು!
ಒಡಲ ದುಃಖ ಕಡಲಗಲವಾಗಿ
ಉರುಹಿ ಉರುಹಿ ಬೇಸರವಾಗಿ
ದುಃಖ ಉಮ್ಮಳಿಸಿತೆನ್ನ
ದೇಹ ಭಾರವಾಯಿತೆನ್ನ
ಉಸಿರು ಭಾರವಾಯಿತೆನ್ನ
ಭುವಿಗೆ ಭಾರವಾದಂತೆ ಭಾಸ
ಕೆಣಕಿ ಕೆಣಕಿ ಅಣಕಿಸಿತ್ತು ಮೌನ
ಮುಂದೊಂದು ಕ್ಷಣಕೆ
ನೂಪುರದ ರಿಂಘಣವಾಗಿತ್ತು ಮನಕೆ
ಮೌನ ಮುರಿದು ಶಬ್ದ ತಡೆಯದಾದೆ
ಮಿಂಚಿನ ಸಂಚಾರ ದೇಹಕ್ಕಾಗಿ
ಚಿಂತೆ ಚಿಂತನೆಯ ತಿರುವು ಪಡೆಯೆ
ಭಾವನೆಗಳು ಬದಲಾಗಿ
ಭಾರ ನಾನಾಗಲೊಲ್ಲೆ
ಆಭಾರಿಯು ನಾ ಈ ಭುವಿಗೆ
ಸಕಲ ಜೀವ ಕೋಟಿಗೆ
ಋಣಿಯು ನಾ ಎಲ್ಲರಿಗೆಂದು ಬಗೆದು
ಋಣವ ತೀರಿಸಲು ಬೇಕು
ಕಗ್ಗತ್ತಲು ಮೌನ ಸರಿಯಲಾಗಿ
ದಿವ್ಯ ಜ್ಯೋತಿಯೊಂದು ಒಳಬರಲು
ಕತ್ತಲೆಗೆ ಧನ್ಯತೆಯನರ್ಪಿಸುತ
ಅನುಭವಕೆ ಮಾತು ಬಾರದಾಗಿ
ಅಕ್ಷರಗಳಿಗೆ ಜೀವ ತುಂಬಲು
ದುಃಖವೆಲ್ಲ ಮಿಂಚಿ ಮಾಯವಾಗಿ
ಕಾವ್ಯದ ಹೊನಲಾಯಿತು.
You must log in to post a comment.