ಸದಾ ನೆಲೆಸು!
ಸದಾ ಧ್ಯಾನದಲಿ ನೆಲೆಗೊಳ್ಳಲಿ ಮಸ್ತಕವು
ದೇವ ನಿನ್ನ ಆರಾಧನೆಯ ನೇಮದೊಳು
ಚಿತ್ತ ಭ್ರಾಂತವಾಗದಿರಲಿ ಈ ಮಾಯಾ ಜಗದೊಳು
ಅರಿವಿರದೆ ಬಾಗದಿರಲಿ ಈ ಸೋಗಿನೊಳು
ಸೋಲು ಗೆಲುವು, ನೋವು ನಲಿವುಗಳೆಲ್ಲ
ಕುಂದು ಕೊರತೆ, ಹೊಂದಾಣಿಕೆ ಎಲ್ಲವೂ
ನೀನೆಣಿಸಿದಂತೆ, ನೀ ನಿರ್ದೇಷಿಸಿದಂತಿಹುದಲ್ಲ
ಸಾಗಿಸು ಸುಮಾರ್ಗದಲಿ ಮತ್ತೇನೂ ಬೇಡೆನಲ್ಲ
ಆಗಿದ್ದೆಲ್ಲ ಒಳಿತೆನ್ನುವುದನು ಹೇಳಲಿ ಮನ
ಆಗುವುದೆಲ್ಲ ಒಳಿತೇ ಇನ್ನು ಎನ್ನಲಿ ಪ್ರತಿಕ್ಷಣ
ಘಳಿಗೆ, ನಿಮಿಷ, ಕ್ಷಣಕ್ಷಣಗಳು ನನ್ನ ಕೈಯಲಿಲ್ಲ
ಎನುವುದನು ನಂಬಿ ತಲ್ಲಣಿಸದಿರಲಿ ಈ ಮನ
ದುರಾಲೋಚನೆ, ಹಳಿವ ಮನವನದಲಿ
ಹೊಯ್ದಾಟದ ಸ್ಥಿತಿಯಲಿ ನೀನಿರು ಶಾಶ್ವತ
ಕಂಬನಿಯು ಉಕ್ಕಿ ಬರುತಿರೆ, ಆನಂದಭಾಷ್ಪ
ಗಳುಕ್ಕಿ ಬರುತಿರೆ ನಿನ ಛಾಯೆಯಿರಲಿ ನಿಶ್ಚಿತಾ
ಎಲ್ಲೆಲ್ಲೂ ಸರ್ವವಿಧದಲ್ಲೂ ಸ್ತುತಿಸುತಿರಲಿ
ರಿಂಘಣವಾಗುತಿರಲಿ ಘೋಷವಾಕ್ಯ ಕೇಳುತಿರಲಿ
ನಿನ್ನ ನಾಮಾವಳಿಯ ಪದಪುಷ್ಪವಾಗುತಿರಲಿ
ಸದಾ ನೆಲಸು ನೀ ಚೇತನವಾಗಿ ಎನ್ನ ಮನದಲಿ.
Super very nice