ಸಿಗ್ನಲ್ – ಭಾವನೆ – ಅರ್ಚನೆ – ಕಂಡರಾಗದು

ಸಿಗ್ನಲ್ – ಭಾವನೆ – ಅರ್ಚನೆ – ಕಂಡರಾಗದು

“ಈ ಅರ್ಥವಿಲ್ಲದ ಅರ್ಚನೆ-ಆರಾಧನೆ-
ಗಳನ್ನು ಕಂಡರಾಗದು ನನಗೆ…ಅಂತರಂಗದ
ಭಾವನೆಗಳು ಶುದ್ಧವಾಗಿರಬೇಕು..
ಬಾಹ್ಯದ ಬಡಿವಾರ ಬಿಲ್ಕುಲ್ ಕೂಡದು…”

ಇದು ಇತ್ತೀಚೆಗೆ ಕೇಳಿ ಬರುವ ಸೊಲ್ಲು…

ಹಾ…. ಭಾಯಿ… ಹಾ..
ಇಲ್ಲವೆಂದವರಾರು???
ಆದರೆ ಬಾಹ್ಯ ಕಂಡಂತೆ ಅಂತರಂಗ
ಕಾಣುವದಿಲ್ಲವಲ್ಲ…
ಅಂತೆಯೇ ದಯೆ, ಸಹನೆ, ಭಕ್ತಿ,
ಸಹಾನುಭೂತಿಯಂಥ ಅಂತಸತ್ವ-
ಗಳೇ ಮಾನವತೆಯ ದ್ಯೋತಕಗಳು…

ಪ್ರೀತಿ ಪ್ರೇಮಕ್ಕೆ ಚುಂಬನವಿದ್ದಂತೆ….
ಕರುಣೆಗೆ ದಾನವಿದ್ದಂತೆ….
ವಿರಕ್ತಿಗೆ ತ್ಯಾಗವಿದ್ದಂತೆ….
ಶಕ್ತಿಗೆ ತೋಳ್ಬಲವಿದ್ದಂತೆ…
ನೋವಿಗೆ ಕಂಬನಿಯಿದ್ದಂತೆ…
ಅಮೂರ್ತ ಭಕ್ತಿಗೆ ಈ
ಅರ್ಚನೆ.. ಆರಾಧನೆಗಳೇ
Signal ಗಳು…..

Leave a Reply