ಹೀಗೇ ಏಕೆ ಆಗುತ್ತೆ!
ಮನಸ್ಸೇ ಹೀಗೇಕೆ ನೀನು? ತಿಳಿಯೆ ನಾನು.
ಒಳಗಿನ ಭಾವನೆ ತುಂಬಿ ತುಳುಕುತಿದೆ
ಹೇಳಲಾಗದೆ ತೋರಲಾರದೆ ಅವಿತು ಕುಳಿತಿದೆ
ತಿಳಿಯೆ ನಾನು. ಏಕೆ ಹೀಗೆ?
ಹೃದಯ ತುಂಬ ತುಂಬಿರುವ ಮೌನ ಪ್ರೀತಿ
ಎದುರಿದ್ದರೆ ನೋಡಲಾರೆ ತುಟಿಬಿಚ್ಚಲಾರೆ
ದೂರಾದರೆ ಕಾಣುವ ತವಕ ಹುಚ್ಚು ಮನಸಿನ
ತೋಳಲಾಟ, ಏಕೆ ಹೀಗೆ?
ನೀ ಯಾರೋ ನಾ ಯಾರೋ
ಆದರೂ ನೀ ಪರರೊಡನೆ ನಕ್ಕು ನಲಿಯುತಿರೆ
ಸಹಿಸದೀ ಮನವು ಹಿಂದೆ ಆಗಿರಲಿಲ್ಲ
ಈ ಬಗೆಯ ಮತ್ಸರ ಭಾವನೆಯು ಏಕೆ ಹೀಗೆ?
ಈ ಹೊಸ ಅನುಭವದ ಕುತೋಹಲಕೆ
ನಿಮಿತ್ತ ನೀನೇ ಈ ಉನ್ಮಾದದ ರಸನಿಮಿಷಕೆ
ಮುಗ್ಧವಾಗಿದ್ದ ಮನಸಿಗಿಂದು ನೂರು ಯೋಚನೆಗಳು
ಬಂದು ಕಾಡುತಿದೆ ಏಕೆ ಹೀಗೆ?
ನಾನೇ ಹಾಗೋ ನೀನೂ ಹೀಗೆಯೋ
ಅರಿಯದು ಈ ಮನವು ಅದು ಬೇಕಿಲ್ಲ ನನಗೆ
ಸವಿನೆನಪಲೇ ಇರಬೇಕು ಆನಂದ
ಅರಿಯೆ ಏಕೆ ಹೀಗೆ?
ಬಹು ದೂರದ ಪಯಣವಿದು
ಪವಿತ್ರವಾಗಿರಿಸುವೆ ಈ ಬಂಧ
ಹೀಗೆ ಇರುವ ಪ್ರೀತಿಯೇ ಸುಘಂಧ
ಅದುವೇ ಯಾವುದೋ ಜನುಮದ ಅನುಬಂಧ
ಅದಕೆ ಹೀಗೆ!
You must log in to post a comment.