ಹೊಸ ವರುಷದ ಶುಭಾಶಯಗಳು….

ವಿವಿಡ್ಲಿಪಿ ತಂಡದಿಂದ ಎಲ್ಲರಿಗೂ ಹೊಸ ವರುಷದ ಶುಭಾಶಯಗಳು….
೨೦೧೭ ರ ನವೋದಯದ ಕಿರಣಲೀಲೆ ತಮ್ಮೆಲ್ಲರಿಗೂ ಸುಖ, ಶಾಂತಿ, ಹರುಷ ತರಲೆಂದು ಆಶಿಸುತ್ತೇವೆ.

ತಮ್ಮೆಲ್ಲರಿಗಾಗಿ… ಹೊಸ ವರುಷಕೆ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಒಂದು ಭಾವಗೀತೆ

ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.

ನದನದಿಗಳ ನೀರಿನಲ್ಲಿ
ಗಿರಿವನಗಳ ಮುಡಿಗಳಲ್ಲಿ
ಶಿಲ್ಪ ಕಲಾ ಗಾನ ಕಾವ್ಯ
ಗುಡಿಗೋಪುರ ಶಿಖರದಲ್ಲಿ
ಶುಭೋದಯವ ತೆರೆದಿದೆ.

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರತಂತ್ರದ ಅಟ್ಟಹಾಸ
ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ.

ಹಳಬರಲ್ಲಿ ಹೊಸಬರಲ್ಲಿ
ಹಿರಿಯರಲ್ಲಿ ಕಿರಿಯರಲ್ಲಿ
ಹೊಸ ಚೇತನದುತ್ಸಾಹದ
ಚಿಲುಮೆಚಿಮ್ಮುವೆದೆಗಳಲ್ಲಿ
ಶುಭೋದಯವ ತೆರೆದಿದೆ.

ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.

ವಿಡಿಯೋ: ಯುಟ್ಯೂಬ್ ಕೃಪೆ

1 Comment

  1. ನಿಮಗೂ ಶುಭಾಶಯಗಳು ಸರ್

Leave a Reply