ಅಕ್ಕ – ಆಸ್ಪದ – ಸಖೇದಾಶ್ಚರ್ಯ – ತಿಮಿಂಗಲ

ಅಕ್ಕ – ಆಸ್ಪದ – ಸಖೇದಾಶ್ಚರ್ಯ – ತಿಮಿಂಗಲ

ಅಕ್ಕ
ಹೆಣ್ಣುಮಕ್ಕಳ
ಓದಿಗೆ ಹೆಚ್ಚಿನ
ಆಸ್ಪದವೇ ಇಲ್ಲದ
ದಿನಗಳಲ್ಲಿ
ಹಿರಿಯಕ್ಕನಾಗಿ
ಹುಟ್ಟಿ, ಚಿಕ್ಕವರಿಗೆಲ್ಲ
ಇನ್ನೊಬ್ಬ ಅಮ್ಮನಾಗಿ
ತಾನೇ ಒಂದು ವಿಶ್ವ
ವಿದ್ಯಾಲಯವಾಗಿ
ಬೆಳೆದು ನಿಂತದ್ದು
ಪರಮಾಶ್ಚರ್ಯ …
ಅವಳು ತೊತ್ತಿನಂತೆ
ದುಡಿದು ತುತ್ತು
ಉಣಿಸಿ ಬೆಳಸಿದ
ಕಿರಿಯರೆಲ್ಲ ದೊಡ್ಡವರಾಗಿ
ಕಡಲಾಳದ ತಿಮಿಂಗಲುಗಳಾಗಿ
ಅವಳನ್ನೇ ನುಂಗಿ
ಇನ್ನಿಲ್ಲವಾಗಿಸಿದ್ದು ..
ಸಖೇದಾಶ್ಚರ್ಯ …

Leave a Reply