ಕನಸು

ಕನಸು

ನಿನ್ನೆಯೊಂದು ಕನಸು ಕಂಡೆ
ಮಾಧವಾ ನೀ ಕಂಡೆ
ಕೊಳಲನೂದಿ ನನ್ನ ಅಜ್ಞಾನವ
ಓಡಿಸಲೆಂದೇ ಬಂದೆ.

ಕ್ಷಣ ಕ್ಷಣದಿ ಸಿಲುಕಿದ ಸಂಕಟಕೆ
ಹೆದರಿ ಹೇಡಿಯಾದ ಮನವು
ತೊರೆಯ ಬೇಕೆಲ್ಲವನು ಎನುವಾಗ
ಶಿರದ ಮೇಲೆ ಕೈಗೂಡಿಸಿದೆ ನೀ
ಕಂದನ ರೂಪದಲಿ ಕೊಳಲನೂದಿ

ಆಸೆ ಆಮಿಷಗಳಿಗೆ ಮನವೊಲಿದು
ಸಾಗರದಗಲದ ಸುಖ ಬಯಸಿ
ದುರಹಂಕಾರಿಯಾಗಿ ಮೆರೆವಾಗ
ಸಂಹಾರಕೆ ನಿಂತೆ, ಸಮರಕೂ ನಿಂತೆ
ಪತಿಯ ರೂಪದಲಿ ಕೊಳಲ ಮಾಡುತ್ತಾ

ಎಚ್ಚರಿಸಿದೆ ಎನ್ನ ಕೈಂಕರ್ಯಕೆ
ಬೇಡ ಅನ್ಯ ಎಳೆಯ ಹುಡುಕುವ ಪರಿ ಎಂದು
ಜ್ಞಾನವನು ಚೇತರಿಸಲು ಬಂದೆ
ನಿಜ ಸಖಿಯ ರೂಪದಿ ಕೊಳಲನಾದದಿ………….

ಮಾಧವನೀಗ ಮಾಯವಾದ
ದೇವ ಈಗ ಕಾಯೊ ಎನ್ನ
ಕೊಡು ಮತಿಯ ಪ್ರಾಯಚ್ಚಿತ್ತ ಬೇಕೆನಗೆ
ಶಕ್ತಿ ವರ್ಜಿಸು ನನ್ನಲ್ಲಿ
ಕಾಣಲು ದೈವವ (ಮಾಧವನ) ಎಲ್ಲರಲ್ಲಿ
ದೇಹ ಸೌಂದರ್ಯ ಬೇಡೆನೆಗೆ
ಮನಸು, ಮಾತು ಹೂವಿನ ಹಂದರವಾಗಲಿ

ಹೆಜ್ಜೆ ಹೆಜ್ಜೆಗೂ ನಿನ್ನ ಕಾಣುವ
ಮಾರ್ಗ ತೋರೋ ಮಾಧವ
ಕನಸಿನಂತೆ ಮಾಯವಾಗಲು
ಬಿಡೆನು ನಾನು ಸದಾ ವಹಿಸುವೆ ಎಚ್ಚರ
ಓ ಮಾಧವ

Leave a Reply