ಚಂಚಲಕ್ಕಾ

ಚಂಚಲಕ್ಕಾ

ಛಂಗ ಛಂಗನೆ ಕುಣಿಯುತ
ಮಾಯದ ಕೋಡಗ ಬಂದಿತ್ತು
ಎದುರಿಗೆ ನಿಂತು ನಕ್ಕು ನಲಿದು
ಮೋಡಿಯ ಮಾಡಿತ್ತು
ಒಡನೆ ಗೆಳೆತನ ಬೆಳೆಸಿತ್ತು
ಮನದಲಿ ನೂರು ಆಮಿಷ ಒಡ್ಡಿ
ಮನವನು ಚಂಚಲ ಮಾಡಿತ್ತು.
ಬೇಕು ಬೇಕುಗಳ ಸುಂದರ ಗೋಪುರ
ದಿನೆ ದಿನೆ ಏರಿಸಿ ಹುಚ್ಚದೊ ಹಿಡಿಸಿತ್ತು
ಎಲ್ಲೆಡೆ ಗರಗರ ಓಲಾಡಿಸಿ ತಾ
ಒಳಗೆ ಮನೆಯನೆ ಕಟ್ಟಿತ್ತು.
ಸ್ವಾರ್ಥದ ಕುಟಿಲತೆ ಬೆಳೆಸಿತ್ತು
ಮನುಜನ ಜುಟ್ಟನೆ ಹಿಡಿದಿತ್ತು.
ಆಸೆಯ ಮದದಲಿ ಚಂಚಲನಾದರೆ ಕೋಡಗ ಸೌಧವ ಕಟ್ಟುವುದು
ಇದ್ದುದರಲ್ಲಿ ಸುಖವನು
ಕಾಣುವವಗೆ ಕೊಡಗ ಅರಿಯುವುದು
ಗಟ್ಟಿಗನಿವನೆಂದು ಬಗೆದು
ಒಡನೆ ಬೆದರುವುದು
ಮೋಡಿಯ ಜಾಲಕೆ ಬೀಳದೆ
ಸರಳತೆಯಿಂದಿರೆ ಕೋಡಗ
ಎಂದೂ ಹತ್ತಿರ ಸುಳಿಯದು
ಮನುಜಗೆ ಸುಖ ಶಾಂತಿಯು ಲಭಿಸುವುದು.

Leave a Reply