ನಾಲ್ಕು – ಮೂರು – ಎರಡು – ಒಂದು

ನಾಲ್ಕು – ಮೂರು – ಎರಡು – ಒಂದು
ಯಾವುದೇ ಒಂದು ವಿಷಯಕ್ಕೂ ಎರಡು ಮಗ್ಗಲುಗಳು…
ಸತ್ಯ… ಸುಳ್ಳು…
ಪ್ರತಿಯೊಂದು ಸತ್ಯಕ್ಕೂ
ಮೂರು ಮಗ್ಗಲುಗಳು
ನಾ ಹೇಳುವದು…
ಇತರರು ತಿಳಿದದ್ದು….
ನಿಜವಾಗಿ ಇದ್ದದ್ದು….

ಆದರೆ…. ಆದರೆ….
ದುರಂತ ಬೇರೆಯೇ ಇದೆ…

ಯಾರಾದರೂ ನಾಲ್ಕು ಜನ
ಗಟ್ಟಿ ಧ್ವನಿಯಲ್ಲಿ ಸುಳ್ಳನ್ನು
ಹತ್ತಾರು ಬಾರಿ ಹೇಳಿದರೆ
ಅದೇ ಸತ್ಯವಾಗಿ
ಉಳಿದು ಬಿಡುತ್ತದೆ…
ಅಲ್ಲಿಗೆ ಸತ್ಯ-ಹರಿಶ್ಚಂದ್ರರಿಗೆ
ಸುಡಗಾಡೇ ಗತಿ……..

Leave a Reply