ಮುಗ್ಧ ಮನಸು.

ಮುಗ್ಧ ಮನಸು.

ಸುಘಂಧ ಭರಿತ ಪಾರಿಜಾತ ಮುಗ್ಧಮನಸ್ಸು
ಕೆಸರಲ್ಲೂ ಸೌಂಧರ್ಯ ಮೆರೆವ ಕಮಲ ಮುಗ್ಧಮನಸ್ಸು
ಬಂಜರು ನೆಲದಲ್ಲಿ ಅರಳಿದ ಗುಲಾಬಿ ಮುಗ್ಧಮನಸ್ಸು

ಹರಿವ ಹೊಳೆಯ ತಿಳಿ ನೀರಿನಂತೆ ಮುಗ್ಧಮನಸ್ಸು
ಪುಷ್ಕರಣಿಯ ಪವಿತ್ರ ಜಲದಂತೆ ಮುಗ್ಧಮನಸ್ಸು
ಗರ್ಭಗುಡಿಯ ದೇವರ ಪಾದದಿ ರಾರಾಜಿಸುವ ಪುಷ್ಪ ಮುಗ್ಧಮನಸ್ಸು

ಗಂಧದ ಮರದೊಳು ಅವಿತಿರುವ ಸೌಗಂಧ ಮುಗ್ಧಮನಸ್ಸು
ಹುಲುಸಾಗಿ ಬೆಳೆ ಕೊಡುವ ಫಲಭರಿತ ಮಣ್ಣು ಮುಗ್ಧಮನಸ್ಸು
ಆಕಾರವಿಲ್ಲದ ನಿರಾಕಾರ ಆತ್ಮ ಮುಗ್ಧಮನಸ್ಸು

ಇರುಳ ಅಂಧಕಾರದಲಿ ಬೆಳಕನೀವ ಹಣತೆ ಮುಗ್ಧ ಮನಸ್ಸು
ಕಾಮ, ಕ್ರೋಧವ ಅರಿಯದೆ ಶಾಂತವಿರುವ ಚಿತ್ತ ಮುಗ್ಧಮನಸ್ಸು
ಅಕಾರಣ ಅಳುವ ನಗುವ ತೊಟ್ಟಿಲ ಮಗುವು ಮುಗ್ಧಮನಸ್ಸು

ಮುಗ್ಧತೆಗೆ ಕೆಡಕುಗಳ ಅರಿವಿಲ್ಲ ಬಾಹ್ಯ ಅಂತರಾತ್ಮಗಳೆರಡೂ ಒಂದೇ
ನುಡಿ ಕೃತಿ ಎರಡೂ ಕೂಡಿ ಕಾಯಕದಲಿ ಲೀನವಾಗುವುದು
ಅದುವೇ ಮುಗ್ಧ ಮನಸ್ಸು! ನನ್ನದಾಗುವ ಮನಸ್ಸು!

Leave a Reply