ಮೃದುವಚನ – ಭಕ್ತ – ಕರ್ಪೂರ – ಅಣ್ಣ

ಮೃದುವಚನ – ಭಕ್ತ – ಕರ್ಪೂರ – ಅಣ್ಣ

ಮೃದು ಮಧುರ ವಚನಗಳಲ್ಲಿ
ಅಣ್ಣಾ, ಅಪ್ಪಾ, ಅಮ್ಮಾ, ಅಕ್ಕ
ಎಂದೆಲ್ಲ ನುಡಿದರೆ ಜನ
ಮರುಳಾಗುವ ಕಾಲವಿದಲ್ಲ…

ಮುಖಕ್ಕೆ ವಿಭೂತಿ, ಮೈಗೆ ಕಾಷಾಯ ವಸ್ತ್ರ,
ಕೈಲಿ ಕಾಯಿ, ಕರ್ಪೂರ
ಬಾಯಲ್ಲಿ ಮಣಮಣ ಮಂತ್ರಗಳಿಂದ
ಭಕ್ತವರ್ಗ ಸೃಷ್ಟಿಸಿಕೊಳ್ಳಲಾಗುವದಿಲ್ಲ….

ಜನರೀಗ ಎಚ್ಚತ್ತಿದ್ದಾರೆ….
ಒಬ್ಬರು ಎಲ್ಲರನ್ನೂ ಒಮ್ಮೆ
ಮೂರ್ಖರನ್ನಾಗಿಸಬಹುದು..
ಎಲ್ಲರೂ ಒಬ್ಬನನ್ನು ಒಮ್ಮೆ ಮೂರ್ಖನನ್ನಾಗಿಸಬಹುದು…
ಆದರೆ ಎಲ್ಲರೂ, ಎಲ್ಲರನ್ನೂ, ಎಲ್ಲಕಾಲಕ್ಕೂ
ಮೂರ್ಖರನ್ನಾಗಿಸುವದು
ಖಂಡಿತ ಸಾಧ್ಯವಿಲ್ಲದ ಮಾತು…..

Leave a Reply