ಮೆದೆ – ಲಾವಣಿ – ತಿರುಗುಬಾಣ – ಅಂತರ್ಧಾನ

ಮೆದೆ – ಲಾವಣಿ – ತಿರುಗುಬಾಣ – ಅಂತರ್ಧಾನ

ಮೆದೆ ಹುಲ್ಲಿಗೆ ಕಡ್ಡಿ ಗೀರಿ
ಝಳದಲ್ಲಿ ಹಲಗೆಗಳನ್ನು ಕಾಸಿ
ಜೋರಾಗಿ ಬಡಿಯುತ್ತಾ
ಲಾವಣಿಗಳನ್ನು ಹಾಡುತ್ತಾ
ಹುಣ್ಣಿವೆಯ ರಾತ್ರಿಗಳನ್ನು
ಹಬ್ಬವಾಗಿಸುತ್ತಿದ್ದ
ಹಳ್ಳಿಗರನ್ನು ನೆನೆದಾಗೊಮ್ಮೆ
ನಮ್ಮ ಬಾಲ್ಯ ಮರುಹುಟ್ಟು
ಪಡೆಯುತ್ತದೆ..

ಜೊತೆಜೊತೆಗೆ ಸದಾ ಒಂದಿಲ್ಲೊಂದು
ಕಿರಿಕಿರಿಯಿಂದ ನಮ್ಮ ಬಾಲ್ಯ
ಕಸಿಯುತ್ತಿದ್ದ ಮನೆಯವರಿಗೆ
ತಿರುಗು ಬಾಣವಾಗಿ ಮನೆಯಿಂದ
ಅಂತರ್ಧಾನರಾಗಿ ಅದು ಹೇಗೋ
ಆ ಗುಂಪು ಸೇರಿ ಮಾಡುತ್ತಿದ್ದ
ಮೋಜು ಈಗಲೂ ಮೈಮನಸ್ಸನ್ನು
ಅರಳಿಸುತ್ತದೆ..

Leave a Reply