ಯಾಕೆ – ಹೀಗಾಯ್ತು – ನಾನು – ಕಾಣೆನು

ಯಾಕೆ – ಹೀಗಾಯ್ತು – ನಾನು –  ಕಾಣೆನು

ಯಾಕೆ? ಹೇಗೆ-ಎಲ್ಲಿ? ಯಾವಾಗ? ಯಾರು?
ಇಂಥ ಪ್ರಶ್ನಾರ್ಥಕಗಳೇ ಜ್ಞಾನದ ಕೀಲಿ ಕೈ….
ಜ್ಞಾನ ಭಂಡಾರದ ರಹದಾರಿ…
ಹೀಗಾಯ್ತು..ಹಾಗಾಯ್ತು…ಹೇಗಾಯ್ತು..
ಅಂತೆಲ್ಲ ವ್ಯರ್ಥಾಲಾಪಗಳ ದಾರಿಬಿಟ್ಟು
ನನ್ನನ್ನು ನಾನೇ ಅರಿಯುವ,
‘ನಾನು ಕಾಣೆನು’ ಅನಿಸಿದ್ದನ್ನು ಕಂಡುಕೊಳ್ಳುವ,
ಹತ್ತಾರು ದಾರಿಗಳಲ್ಲಿ
ಒಂದನ್ನು ಆರಿಸಿಕೊಂಡು
ನೆಮ್ಮದಿಯ ಬದುಕು ಕಂಡುಕೊಳ್ಳುವದೂ
ಸಹ ‘ಜೀವನ ಸಾಕ್ಷಾತ್ಕಾರ’…

Leave a Reply