ವೃಕ್ಷ!

ವೃಕ್ಷ!

ವೃಕ್ಷವೆಂಬೋ ಫಲಭರಿತ ಗುರುವು
ಬೆಳೆದು ನೆರಳ ನೀಡುವುದು ಮನುಜಗೆ
ಶಿಷ್ಯರೆಂಬೋ ಜನರು ಕುಳಿತು ನೆಮ್ಮದಿಪಡೆಯಲೆಂಬ ಈ ಬಗೆ

ಮೊದಲು ಚಿಗುರು, ಕುಡಿ, ವಗರುಕಾಯಿ
ನಂತರದಿ ಗಾತ್ರ ದೊಡ್ಡದಾದ ಹುಳಿಕಾಯಿಯು
ಅಂತ್ಯದಲಿ ಸಿಹಿಯಾದ ಕಾಯಿ ಕಾಯ್ದಿರುಸುವನು

ಗುರುವು ಕಾದು ನೋಡುವನವನ ತವಕ
ಯಾರು ಯಾವುದಾಯ್ವರು?
ಶ್ರಮಕೆ ಯಾರು ತಪಿಸುವರೆಂದು ಪರೀಕ್ಷೆಯನು ಮಾಡ್ವನು

ಚಿಗುರನೆ ತಿಂದನೊಬ್ಬ, ಕುಡಿ,ವಗರು ಮತ್ತೊಬ್ಬ
ಗಾತ್ರಕಾಸೆ ಪಟ್ಟು ಹುಳಿಯನೇ ತಿನ್ನುವನಿನ್ನೊಬ್ಬ
ದಿನವು ಕಾಯ್ದು ಹಣ್ಣನು ಬಯಸುವವ ಶಿಷ್ಯನು

ಚಿಗುರು ತಿನ್ನುವವನ ತೀಡಿ, ಕುಡಿ, ವಗರಿನವನ ಬೆನ್ನ ಸವರಿ
ಗಾತ್ರಕಾಸೆಪಟ್ಟವನ ಪಿಡಿದು ಬುದ್ಧ ಚರಿತೆ ಪೇಳಿ
ಹಣ್ಣ ಹಿಡಿದವನ ಮುಂದಿನ ಹಾದಿ ತೋರುವನು.
ವೃಕ್ಷವೆಂಬ ಗುರುವು ಅವನು.

1 Comment

  1. Abba very nice

Leave a Reply