ಸೂತ್ರಧಾರಿ

ಸೂತ್ರಧಾರಿ

ನಾನೊಂದು ಗೊಂಬೆ
ದಾರ ಹಿಡಿದ ಸೂತ್ರಧಾರಿ ನೀನು
ಕೊಟ್ಟ ಪಾತ್ರಕೆ ಬದ್ಧಳು ನಾನು
ಕ್ಷಣಕೆ ಅಳಿಸಿ ಕ್ಷಣಕೆ ನಗಿಸಿ
ಕಷ್ಟದಲಿ ಸಹನೆ ಇರಿಸಿ
ಸುಖದಿ ಆನಂದ ಕೊಡುವವನೂ ನೀನು
ಧೈರ್ಯ, ಅಧೈರ್ಯ ನಿನ್ನಿಂದಲೇ
ಸಹನೆ, ಅಸಹನೆ ನಿನ್ನಿಂದಲೇ
ನಟನೆಯ ಮಾರ್ಗದರ್ಶಿ ನೀನೇ
ನಿರ್ದೇಶಕನೂ ನೀನೇ
ರಂಗಕ್ಕಿಳಿಸುವವ ನೀನು
ಸಾಕೆನಿಸಲು ಕರೆಸಿಕೊಳ್ಳುವವ ನೀನು
ಪಾತ್ರ ತಪ್ಪಿದಲಿ ಶಿಕ್ಷೆ ವಿಧಿಸಿ
ಉತ್ತಮ ಪಾತ್ರಕೆ ಉತ್ತುಂಗಕ್ಕೇರಿಸಿ
ಸಜ್ಜನವಾಗಿಸುವವ ನೀನು
ಇರುವುದೆಲ್ಲರ ಸೂತ್ರ ನಿನ್ನಲ್ಲಿ
ಮನುಜ ಅರಿತು ಅರಿಯದಾದ
ಎಲ್ಲ ತಾನೇ ಎಂಬ ಹುಚ್ಚು ಭ್ರಮೆಯಲ್ಲಿ.

Leave a Reply