ಹನಿ ಹನಿ-೧

ಹನಿ ಹನಿ

ಗಣಿತವೇ ಅಷ್ಟು
ಸಂಕಲನ, ವ್ಯವಕಲನ
ಮತ್ತೆ ಸಂಕಲನ
ಬದುಕಿನ
ಸಂಬಂಧಗಳೂ
ಕೂಡುತ್ತಾ, ಕಳೆಯುತ್ತಾ
ಮತ್ತೆ ಕೂಡುತ್ತಾ ಹೋಗುವ
ಸರಳ ಗಣಿತ…
ನಿತ್ಯ ಹಸಿರಾಗುವ ಪ್ರಕೃತಿಯಂತೆ.

∗   ∗   ∗

ಬೋಳಾದ ಮರಕೆ
ಮತ್ತೆ ಚಿಗುರ ಲೇಪಿಸಿ
ಹಸಿರಾಗಿಸಿದ ಕಾಲ
ನೋವ ಉಣಿಸಿದ ಮನಕೆ
ಮತ್ತೆ ತರಲಾರದೇಕೆ
ಹರುಷ?

∗   ∗   ∗

ಎಡೆ ಬಿಡದೇ
ಸುರಿವ ಮಂಜು
ಆಳಕ್ಕಿಳಿವ ಚಳಿ
ಸ್ವೆಟರಿಗೂ ಬಿಸಿಯಾಗದ
ಮೈ-ಮನಕೆ
ನಿನ್ನ ನೆನಪು ಮಾಡಿತೀಗ ಬೆಚ್ಚಗೆ!

∗   ∗   ∗

ಕಕ್ಕುಲತೆಯಿಂದ
ಅಪ್ಪ ನೆಟ್ಟ
ಮಾವಿನ ಓಟೆ
ಚಿಗುರೊಡೆದು
ಮರವಾಗಿ
ನೆರಳಾಯಿತು
ನೆರೆಮನೆಗೆ!

∗   ∗   ∗

ಸುಡುವ ಕೆಂಡ ಇಳೆಯ ಒಡಲು
ತಂಪು ತಂದ ಮೋಡ-ಮಳೆಯು
ಸುರಿಸಿ ಹನಿಯ, ತಂಪನೆರೆದು
ಮಾಡಿತೀಗ ಭೂಮಿ ಬಸಿರು
ಹೊದಿಸಿ ಇಳೆಗೆ ಪಚ್ಚೆ-ಪೈರು.

∗   ∗   ∗

Leave a Reply