ಹನಿಗವನಗಳು

1. ನಿಯತ್ತು

ನನ್ನ ಗಂಡ ಶ್ರೀರಾಮಚಂದ್ರ
ಅಪ್ಪಿ ತಪ್ಪಿಯೂ ನೋಡಲ್ಲ
ಪರಸ್ತ್ರೀಯರ..
ನಾನವನೊಡನಿದ್ದಾಗ!

2. ಗಮ್ಮತ್ತು

ಹುಡುಗ
ಹುಡುಗಿಗ
ಕೊಟ್ಟ
ಮುತ್ತುಗಳ
ಕಿವಿಗಿಟ್ಟುಕೋ ಎಂದು!!

3. ಮಡಿ

ಹಿ೦ದಿದ್ದಷ್ಟು
ಈಗಿಲ್ಲ ಮಡಿ
ಈಗಿನ ಹುಡುಗಿಯರೆಲ್ಲ
ಹಾಕತಾರ ಮಿನಿ-ಮಿಡಿ!

4. ಹಂಗು

ನಿನ್ನ ಹಂಗಿಲ್ಲದೆ
ಬದುಕುತೀನೆಂದು
ಜಗಳವಾಡಿದ
ಪತಿ
ಬೆಳಗಾಗೆದ್ದು ಹ್ಯಾಂಗರಿನಲಿದ್ದ
ನನ್ನ ಶರಟೆಲ್ಲೇ ಅಂದ!!

5. ಮೊದಲ ಪತ್ರ

ನಾ ಬರೆದೆ
ನನ ಪ್ರಿಯಕರನಿಗೆ
ಮೊದಲ ಪತ್ರ
ಅದೂ ಸೀದಾ ಹೋಗಿ
ಸೇರಿತು
ಅವನ ಅಪ್ಪನ ಹತ್ರ!

6. ಆರತಿ

ಮದುವೆ ನಂತರ
ಮೂರು ತಿಂಗಳು ಆದರೆ
‘ಆರತಿ’
ಮುಂಚೆನೇ ಆದರೆ
ಮುಖಕ್ಕೆ ‘ಮಂಗಳಾರತಿ’!

14th Feb 2002 – ಸುಧಾ ವಾರ ಪತ್ರಕ

7. ಆಫೀಸಿನಲ್ಲಿ

ತೂಕಡಿಸುವ
ಜವಾನ
ಆಗಾಗ್ಗೆ
ಎಚ್ಚರಗೊಳ್ಳುವ
ಯಜಮಾನನ
ಗೊರಕೆ ಸದ್ದಿಗೆ !!

8. ತಪ್ಪು + ಅಪ್ಪುಗೆ = ತಪ್ಪೊಪ್ಪಿಗೆ

ಅವನ
ಅಪ್ಪಿದ್ದೇ
ತಪ್ಪಾದರೆ
ತಪ್ಪೊಪ್ಪಿಗೆ
ಕೊಟ್ಟು ಬಿಡುವೆ!

Leave a Reply