ಚುಟುಕುಗಳು

ಚುಟುಕುಗಳು
1.ಪ್ರೇಮಿಗಳಿಬ್ಬರು ಒಲುಮೆಯಲಿ ವಿಶಾಲ ಸಾಗರ
ನಡೆದಿದೆ ಮೌನ ಸಂಭಾಷಣೆಗಳ ಮಹಾಪೂರ
ಅಗಲಿ ಇರಲಾರದ ಸಿಹಿ ಸಂಕಟಗಳ ಅಬ್ಬರ
ಆತ್ಮಗಳ ಮಧುರ ಮಿಲನದ ಶೃಂಗಾರ

2.ಅಂಬರದಲಿ ರಥವೇರಿದ ಹೊಂಗಿರಣದ ಸೂರ್ಯ
ಇದುವೇ ಋತುಮಾನದ ಪಲ್ಲಟದ ಕಾರ್ಯ
ಕಳೆದು ಮೈಚಳಿ ತಂಡಿಹ ಬಿಸಿ ಝಳದ ಸಾರ
ಹೊಂದಾಣಿಕೆಯೇ ಮನುಜನ ನೈಜ ಕಾಯ

3. ಸಿರಿತನವೆನಿತು ಕರುಣಿಸುವುದು ಹೃದಯನಂದ
ಬಡತನದಲ್ಲೂ ಒಲವ ಉಂಡವನೆ ಆತ್ಮಾನಂದ.
ಬೇಕಿಲ್ಲ ಹಣದ ದರ್ಪ ಹಸಿವ ನೀಗಿಸಲು
ನೈಜ ನಡೆ ನುಡಿ ಒಂದೇ ಸಾಕು ಬದುಕಲು

4.ಅವಳೊಂದು ಅನಂತ ಶಕ್ತಿ
ಅರಿಯಲು ಬೇಕು ತುಂಬಾ ಶಕ್ತಿ
ಇದ್ದರೆ ಸಾಕು ಅವಳಲ್ಲಿ ಭಕ್ತಿ
. ಪ್ರಜ್ವಲಿಸುವುದು ಅಂತರಂಗದ ಭುಕ್ತಿ
ಆಗಲೇ ಸಿಗುವುದು ಪರಮ ಮುಕ್ತಿ

5. ಆ..ಕಡಲ ತೀರ ನೋಡಲು ಸೇರಿದರು ನಲ್ಲನಲ್ಲೆ
ಮುಳುಗಿದರು ಭಾವ ಭಾವನೆಗಳ ಅನುಭಾವದ ಲ್ಲೇ
ಬರೆದರು ಪ್ರೇಮ ಕವಿತೆಯ ಅಲೆಗಳ ತಂಪಲ್ಲೆ
ನಿಜವಾದ ಪ್ರೇಮಿ ಅವಲ್ಲದೆ ಬೇರಿಲ್ಲ ನಾ ಬಲ್ಲೆ

Leave a Reply