ದೇವರಿಗೊಂದು ಪತ್ರ-(13)

ದೇವರಿಗೊಂದು ಪತ್ರ(13)
ನೀ ಸೌಖ್ಯವಿರಲು ಸಕಲವೂ ಸೌಖ್ಯ ಮಾಧವ
ಇಂದು ಘಾಸಿಯಾದ ಮನಕೆ ನೀ ಆವರಿಸಿ ಸಂತೈಸಿದೆ ಕರುಣಾಮಯಿ
ನೇವರಿಸಿ ಶಿರವ ಜನಕನಂತೆ ಹೇಳುವ ಪರಿಯ ಹೇಗೆ ಬಣ್ಣೀಸಲಿ?
ನೂರು ನೋವ ಮರೆವೆ ಕ್ಷಣಕೆ ನಿನ್ನ ಮಂದಸ್ಮಿತದಲಿ
ಅತುಲಾತೀತ ಆನಂದವೋ ಹರಿ ನಿನ್ನ ದರುಶನದಲಿ
ಮೊಗವ ನೋಡುತ ನಿನ್ನ ಕಳೆದು ಹೋಗುವೆ ನಾ ಇದಾವ ಭಕ್ತಿಪರಿ
ಕಮಲವದನ ನನ್ನಳುವ ಕಂಡು ನಗುವುದೇನು ಸರಿ
ಮಾಯೆಯ ಆದಿಯಲ್ಲಿ ನಿಲ್ಲಿಸಿ ಎನ್ನ ಪರೀಕ್ಷಿಸುವುದೇ ನರಹರಿ?
ಉತ್ತೀರ್ಣ ಅನುತ್ತೀರ್ಣ ಎಲ್ಲವೂ ನಿನ್ನ ಆಟವ ಲ್ಲವೇ ಮುರಾರಿ!
ನೀಡುವವನು ಕಸಿದು ಕೊಳ್ಳುವ ಜಾಣನು ಕೃಷ್ಣನೇ ಸರಿ
ನಂಬಿದವರ ಕೈ ಬಿಡದೆ ಸಲಹುವ ದೇವೇಶ ನೀ ಅನಂತಾದ್ರಿ
ಅಂದು ಅನುಭವಿಸಿದ ಅನುಭಾವಕೆ ನೀನಲ್ಲದೆ ಸಾಕ್ಷಿ ಯಾರು ಶ್ರೀಹರಿ
ನಾನಿರುವೆ ಎಂದು ಹೇಳಿರುವೆ ನೆನಪಿರಲಿ ಓ ಹರಿ
ಮತ್ತೆ ಬರೆವೆ ಪತ್ರ ನಾಳೆ, ಓದು ವೆಂಕಟಗಿರಿ.

ಇಂತಿ
ಉಮಾ ಭಾತಖಂಡೆ.

Leave a Reply