ದೇವರಿಗೊಂದು ಪತ್ರ 2
ಏಕೆ? ನಂದನ ಪತ್ರಕ್ಕೆನ್ನ ಉತ್ತರಿಸಲಿಲ್ಲ?
ನಾನು! ನಿನಗಾಗಿ ಕೊರಗುತ್ತಿರುವವಳು
ಇನ್ನೂ ಕೋಪ ಮಾಸಿಲ್ಲವೇ? ಹೇಳಿಬಿಡು
ನಿನ್ನ ಭೇಟಿಗೆ ಬಂದಾಗಲೆಲ್ಲಾ ಕೇಳಿದ್ದು ನೆನಪಿದೆ
ಆನು ತಾನು ಎಂದು ಬೆಡಿದ್ದೇ ಹೆಚ್ಚು
ಅದೇ ಕೋಪ ನಿನಗಿರಬಹುದು ಅಲ್ಲವೇ?
ಖಚಿತವಾಗಿದೆ ಈಗ, ಅದೊಂದು ಹುಚ್ಚು
ಉತ್ತುಂಗಕ್ಕೇನೋ ನನ್ನ ನೀ ಬಯಸುತ್ತಿರುವಿ
ಎಲ್ಲಿ ಮರೆತು ಬಿಡುವೆನೋ ಎಂಬ ಭಯದಲಿ
ಕೃಷ್ಣ ಕೃಷ್ಣಾ.. ಎಂದು ಹಲಬುವಂತೆ ಮಾಡಿರುವಿ
ಅದೇಕೋ ಈಗ ನನಗದಾವುದು ಬೇಡವಾಗಿದೆ
ಬಾಗಿಲಲಿ ನೀ ಬಂದ ಹಾಗೆ ಈ ಎರಡು ದಿನದಲಿ
ಕೋಣೆಯಲ್ಲಿ ಹುಡುಕಿದಂತೆ ಭ್ರಮೆ ಚಿತ್ತದಲಿ
ನೆನೆಕೆಯಲಿ ದೇಗುಲಕೆ ಬರಲು ದರುಶನ ನೀಡಿ
ತೃಪ್ತಿ ತಂದಿಹಿ, ಹಸನ್ಮುಖಿಯಾಗಿ ತೋರುತಿಹಿ
ಆತ್ಮವನು ಶುದ್ಧವಾಗಿಸಲು ಒರೆಗೆ ಹಚ್ಚುತ್ತಿಹಿ
ಮೇಲಿಂದ ಮೇಲೆ ನನಗೇ ಪರೀಕ್ಷಿಸಲು ನೀನು!
ನನ್ನ ಮೇಲಿನ ನಿನ್ನ ಪ್ರೀತಿ ಅರಿವಾಗಿದೆ ಈಗ
ನಾನಿನ್ನು ಬೇಡೆ ಏನನ್ನು ನೀ ಬರುವುದಾವಾಗ
ತಿಳಿಸು ಬೇಗ ನೀ ಇನ್ನು ಬರುವುದು ಯಾವಾಗ?
ನಿನ್ನ ಉತ್ತರಕ್ಕೆ ಕಾಯುವೆ ಪತ್ರ ಬರೆ ಶೀಘ್ರ.
ಉಮಾ ಭಾತಖಂಡೆ.
You must log in to post a comment.