ದೇವರಿಗೊಂದು ಪತ್ರ(25)

ದೇವರಿಗೊಂದು ಪತ್ರ(25)
ನಾ ಸೌಖ್ಯವೆಂದು ಹೇಗೆ ಹೇಳಲಿ ಮಾಧವ?
ನಿನೇಕೋ ಮನಸಲ್ಲಿ ನೆಲೆ ನಿಲ್ಲದಾದೆ ಕೇಶವ!
ಕನಸಲ್ಲೂ ಬಾರದೆ ಹೃದಯದಲ್ಲೂ ಬಾರದೆ ಶ್ಯಾಮ
ನಾ ಉಸಿರು ಕಟ್ಟಿರುವೆ ಏಕೆ ಈ ಪರೀಕ್ಷೆ ನಂದನ

ರೋಸಿ ಹೋಗಿದೆ ನಿನ್ನ ಈ ಜೀವ ಪಾರುಮಾಡೆನ್ನ ದೇವ
ಕೊಟ್ಟ ಪರೀಕ್ಷೆಗಳಿಗುತ್ತರ ಎದೆಗುಂದದೆ ಬರೆದೆ ಮಹಾದೇವ
ಬರೆದಷ್ಟೂ ಮತ್ತೆ ಮತ್ತೆ ನೀ ಪ್ರಶ್ನೆಗಳ ಕಟ್ಟು ತಂಡಿತ್ತೆ ಮಾಧವ
ಅಭಯ ಹಸ್ತವಂತೂ ನೀಡಿದೆ ಪರರನು ಬಳಿ ಕಳಿಸಿ ಅಚ್ಯುತ

ಹೇ..ಯದುನಂದನ ಸಾಕು ಈ ಪಾತ್ರ ಎನಗಿನ್ನು
ಎಷ್ಟೆಂದು ಬರೆಯಲಿ ಅದೇ ಕ್ಲಿಷ್ಟ ಉತ್ತರಗಳ ಗೋವರ್ಧನ
ಸಾಮಾನ್ಯ ಬಡ ಜೀವಿ ನಾನು ದೈವಸಂಭೂತಳಲ್ಲ
ನಾ ಪ್ರೀತಿ ಪಾತ್ರಳು ನಿನ್ನ ನಾ ಬಲ್ಲೆ ಕಾರಣ ನೀ ಸದಾ ನನ್ನ ಅಂತರಂಗದಲ್ಲಿ ನಿಂತೆ

ಶಕ್ತಿಯೊಂದಿಗೆ ಯುಕ್ತಿಯಾದರೂ ಕೊಡು ಕೇಶವ
ಭಕ್ತಿ ಮಾರ್ಗದಲ್ಲಿ ನಿನ್ನ, ನಡೆದು ಸಾಗುವ ಗಟ್ಟಿ ಗುಂಡಿಗೆಯಾದರೂ ಕೊಡು
ಮೃದು ಮಾನವ ಕೊಟ್ಟು ಎದೆಬಿರಿವ ನಡುಕ ತರುವುದು ತರವೇ ಹೇಳು?
ಆದರೂ ನಿನೆಲ್ಲವ ಪಾರು ಮಾಡುತ್ತಿರುವೆ ನಾ ಬಲ್ಲೆ

ಇನ್ನು ಜೀವ ಸೋತಿದೆ ನನ್ನೋಡೆಯ ನೀ ಸಾಕು ಎನಗೆ!
ಮುಂದಿನ ಪತ್ರದೊಳಗಾಗಿ ನೀ ಒಂದಿನಿತು ಕರುಣೆ ತೋರುವೆ ಎಂದರಿತು ಪತ್ರ ಮುಗಿಸುವೆ
ಈ ಪಾತ್ರಧಾರಿಗೆ ಹೊಸ ಪಾತ್ರ ನೀಡು ಸೃಷ್ಟಿ ಒಡೆಯ!
ಇಂತಿ ನಿನ್ನ
ಉಮಾ ಭಾತಖಂಡೆ.

Leave a Reply