ದೇವರಿಗೊಂದು ಪತ್ರ!- 41

ದೇವರಿಗೊಂದು ಪತ್ರ!( 41)

ಓ ಯಶೋದಾ ನಂದನ ಈ ಪತ್ರ ಓದಿ ನೀ ನಗಬಹುದು ಇಂದು

ಹೇಳುವೆ ಕೇಳು ರಾಧರಮಣ ನಾನಾಚರಿಸಿದ ಪರಿ ನಿನ್ನ ಜನ್ಮದಿನ

ಮೊದಲೆರಡು ದಿನದಿಂದ ಅಮಿತ ಆನಂದ ಹರಿ ಮನದೊಳಗೆ

ಸಾಲು ಯೋಚನೆ ಹತ್ತು ಹಲವು ಯೋಜನೆ ಏನ ಮಾಡಲಿ ಹರಿಯ ಜನ್ಮದಿನಕ್ಕೆ

ಅಂದುಕೊಂಡಿದ್ದೆಲ್ಲ ದೇಹದೊಳಗಿನ ಆತ್ಮ ಮಾಡಿ ಮುಗಿಸಿತ್ತು ಕ್ಷಣಕ್ಕೆ

ಇರಲಿ ಕೇಳು ಬಾಹ್ಯ ಆಡಂಬರವು ಮಾಡಲಿಚ್ಚಿಸಿತು ಮನವು

ಪೋದೆ ಹುಡುಕುತ ನಿನಗಿಷ್ಟದ ಸುಘಂದ ಭರಿತ ಪುಷ್ಪ ಆಯ್ದು ತರಲು

ಮತ್ತೆ ಅಷ್ಟೊತ್ತರಕೆ ತುಳಸಿ ದಳ ಬೇಕೆನಿಸಿತು ಮನಕೆl

ಬಿಳಿ,ಹಳದಿ,ಕೆಂಪು ಬಣ್ಣ ಬಣ್ಣದ ಹೂವ ತರಲು ಮೊದಲು ಮಾಡಿ

ತಡಕಾಡಿದೆ ಸಿಗದೆ ಸರಿ ತೊಟ್ಟಿಲು ನಿನ್ನ ಮಲಗಿಸಿ ತೂಗಲು

ಬರೆದೆ ಮನೆಯೆಂಬ ಮನದ ತುಂಬಾ ನಿನ್ನ ಪಾದದ ರಂಗೋಲಿ

ಅಷ್ಟಾರ್ಚನೆ, ಪುಷ್ಪಾರ್ಚನೆ,ಮಂತ್ರ ಮಂಗಳಾರತಿ ಸಾಂಗವಾಯಿತು

ನಿನ್ನಿಷ್ಟದ ತುಪ್ಪದಿಂದ ಮಾಡಿದ  ಹುರಿದವಲಕ್ಕಿ ಉಂಡೆ ಚಕ್ಕುಲಿ

ಹಾಡಿ ಆರತಿ ಲಾಲಿ ಹಾಡುತಲಿ ಬೀಗಿದೆ ಯಶೋದೆ ಯಂದದಲಿ

ನನಗಿನ್ನೂ ಅಸಮಾಧಾನ ಜನಾರ್ದನ ನಿನ್ನ ಕಾಣುವ ತವಕದಲ್ಲಿ

 

ಉಮಾ ಭಾತಖಂಡೆ.

Leave a Reply