ದೇವರಿಗೊಂದು ಪತ್ರ-(6)

ದೇವರಿಗೊಂದು ಪತ್ರ(6)
ಸೌಖ್ಯವೇ ಮಧುಸೂಧನ?
ನನ್ನದೆಲ್ಲವೂ ನೀನೆ ಬಲ್ಲೆ ಓ..ನಂದನ….
ನಿನ್ನುತ್ತರ ಇನ್ನೂ ಬರಲಿಲ್ಲ ಓನನ್ನ ಮಧುಸೂಧನ
ಇರಲಿ ಕಾಯುವೆ ಬಿಡದೆ ಪತ್ರಕ್ಕಾಗಿ ಅನುದಿನ
ನನ್ನ ಪತ್ರಗಳ ಸತ್ಯ ಮಿಥ್ಯಗಳ ಅವಲೋಕಿಸಿ
ಉತ್ತರಿಸಲು ಮನಸ್ಸಾಗದೆ ನಿತ್ಯ ನೀ ತರ್ಕಿಸಿ
ಅರಿವಿದೆ ನನಗದರ ನಾನೆಷ್ಟು ನಿನ್ನ ಧ್ಯಾನಿ
ಒಳಗಿನ್ನು ಹುದುಗಿಸಿಹೆ ನಾ ಮೌಢ್ಯಗಳ ಅಜ್ಞಾನಿ
ಸಂಬಂಧಗಳ ಸರಪಳಿಯಿಂದ ಹೊರಬರುತ್ತಿಲ್ಲ ಕರುಳಬಳ್ಳಿಯೆನ್ನ ಸಹಚರನೆನ್ನನೆಂಬ ಮೋಹ ಅಡಗಿಲ್ಲಾ!
ಬೇಕು ಬೇಕೆಂಬ ಆಸೆಗಳ ಗೋಪುರ ಕಟ್ಟುವುದು ನಿಲ್ಲಿಸಿಲ್ಲ
ಒಳಿತು ಕೆಡಕನು ಗ್ರಹಿಸದೆ ಕೋಪತಾಪದ ಜ್ವಾಲೆಯಲಿ ಮೆರೆದೆ
ಮಾಯೆಯ ಸುಳಿಯಲ್ಲಿ ಚಂಚಲಳಾಗಿ ಮರ್ಕಟಳಂತಾದೆ
ಪರರ ಸೇವೆಯ ಭಾಗ್ಯ ನೀ ಒದಗಿಸಿದಾಗಲೂ ಗೊಣಗದೆ ಮಾಡದಾದೆ
ಓ.ಮಧುಸೂಧನನೇ ಅಂಕುಡೊಂಕುಗಳಿರಲು ನೀನಾದರೂ ಉತ್ತರ ನೀಡುವಿ ಹೇಗೆ?
ಆ ಡೊಂಕುಗಳತಿದ್ದಿ ಜೀವನಾಂಮೃತ ಪಾಠ ನೀ ಕಲಿಸದೆ ಇದ್ದರೆ ಹೇಗೆ?
ಕೊಟ್ಟು ಬಿಡು ಎನ್ನ ಪಾಲಿನ ಕರ್ಮದ ಎಲ್ಲಾ ಸವಾಲುಗಳ
ಯುಕ್ತಿಯಿಂದ ಗೆಲ್ಲುವ ಶಕ್ತಿಯೂ ಕೊಟ್ಟುಬಿಡು ಒಮ್ಮೆ …ಗೆಲ್ಲಬೇಕು ನಿನ್ನ ಎಂದೆನಿಸಿದೆ
ಕರುಣಾಳುವೆ ಮೃದು ಹೃದಯಿಯೇ ಒಮ್ಮೆ ನಿನ್ನ ಉತ್ತರ ಬರುವ ನಂಬಿಕೆಯಲಿ
ಸಾಗುವೆ ನಿನ್ನ ಸ್ಮರಣಿಕೆಯ ಸುವಿಚಾರದ ಪಥದಲ್ಲಿ.

ಇಂತಿ
ಉಮಾ ಭಾತಖಂಡೆ.

Leave a Reply