ದೇವರಿಗೊಂದು ಪತ್ರ (15)
ಸೌಖ್ಯ.
ವಿನೂತನ ಬಗೆಯಲ್ಲಿ ಮೂಡುತ್ತಿದೆ ಭಕ್ತಿ ರಸವು
ಬಣ್ಣಿಸಲಿ ಹೇಗೆಂದು ಅರಿಯದಾದೆ ಈ ಭಾವವು
ನಿನ್ನ ಪೂಜೆಗೆಂದು ಹಬ್ಬ ಹರಿದಿನವು ಬೇಕೆ?
ಅಮಾವಾಸ್ಯೆ ಹುಣ್ಣಿಮೆಯು ವಿಶೇಷವೇಕೆ?
ನಿತ್ಯ ನಿನ್ನ ಧ್ಯಾನದಲಿ ಅಂತರ್ಮುಖಿಯಾದರೂ ಸಾಕೆ
ಹೋಳಿಗೆ ಪಾಯಸ ಪಕ್ವಾನ್ನವಾದರೂ ಏಕೆ?
ನಿನ್ನ ನಾಮ ಜಪಿಸುತಿರೆ ಕ್ಷೀರ ಪಾಯಸ ಸವಿದಂತೆ
ನಿನ್ನ ಧ್ಯಾನದಲಿ ಲೀನವಾದರೆ ಸಾಕು ಹೂರಣವೇ ಮೆದ್ದಂತೆ
ದರುಶನವಾದರೂ ಸರಿ ಪಂಚ ಪಕ್ವಾನ್ನ ಉಂಡಂತೆ
ನಿನ್ನ ಕಾಣುವ ತವಕ ಇದಾವುದೂ ಬೇಡವೆಂಬಂತೆ
ಕಂಡೆಯಾದೊಡೆ ಜಗವೇ ಮರೆತು ಐಕ್ಯವಾದಂತೆ
ನನ್ನ ಈ ಇಚ್ಛೆ ಎಂದು ಪುರೈಸುವೆ ಹೇಳು ತಂದೆ
ದಿನಗಳು ಕಳೆಯುತ್ತಿವೆ ನಿ ತಿಳಿಸು ಕಾಯಿಸದೆ
ಉಮಾ ಭಾತಖಂಡೆ.
You must log in to post a comment.