ಹಳೇ ಹಾಡು
ತೇಲಿ ಹೋಗುವುದು ಮನ
ಹಳೇ ನೆನಪುಗಳ ಸುತ್ತ
ಅನುರಣಿಸುತಿರೆ ತನನ
ಎದೆಯ ಮೀಟಿ ಮೆತ್ತ
ಭಾವನೆಗಳ ಚಿತ್ರಪಟ
ಕೆದಕಿ ಬಿಚ್ಚಿದೆ ಪರದೆಯ
ತೋರಿದೆ ವಿರಹದ ನೋಟ
ಮರೆಯದ ಅಪೂರ್ವ ಸಮಯ
ಕೇಳಿದಷ್ಟು ಕೇಳಬೇಕೆನ್ನುವ
ಅರ್ಥಪೂರ್ಣ ಕವಿತೆ ಕವನ
ಫಲ್ಲವಿಸುವುದು ರಾಗ ಭಾವ
ಬೆಸೆವುದು ಮಧುರ ಬಂಧನ
ಮನಸ್ಸಿಗೆ ಹಗುರ
ಕಿವಿಗೆ ಇಂಪು
ಚಿತ್ತಕ್ಕೆ ತಂಪು
ಹಳೇ ಹಾಡು ಕಂಪು ಸೊಂಪು.
ಉಮಾ ಭಾತಖಂಡೆ
You must log in to post a comment.