ಹೀಗೊಂದು ಕ್ಷಣ

ಹೀಗೊಂದು ಕ್ಷಣ!

ತೆಂಗು ಕಂಗುಗಳ ಕದಳಿ ವನವಿರಲು ಸುತ್ತ
ಕಪ್ಪು ಅಂಬರದ ತುಂಬೆಲ್ಲ ತಾರೆಗಳಿರುತ

ಬಾನ ನಡುವೆ ಪೂರ್ಣ ಚಂದಿರನು ನಗುತ
ಪುಟ್ಟ ಮನೆಯಂಗಳದ ಸುತ್ತು ಹಣತೆ ಬೆಳಗುತ್ತ

ನಾನು ನೀನು ಕುಳಿತು ಕಡಲ ತೀರ ನೋಡುತ
ತೆರೆ ಮೆಲ್ಲನೆ ಬಂದು ಪಾದ ತೋಯಿಸುತ

ಅಹೋ ರಾತ್ರಿ ಪ್ರಕೃತಿ ಸೊಬಗನು ಸವಿಯುತ
ಕಳೆಯೋಣ ಈ ಕ್ಷಣವ ಜಗವ ಮರೆಯುತ

Leave a Reply