ಕಣ ಕಣದಲ್ಲೂ ಕನ್ನಡ,

ಕಣ ಕಣದಲ್ಲೂ ಕನ್ನಡ,
ಕನ್ನಡಿಗನ ಹೃದಯ ಬಡಿತದಲ್ಲಿ ಮೇಳೈಸಲಿ ಕನ್ನಡ
ಚಿತ್ತದಲ್ಲಿ ಚಿಂತನೆಯ ಹೊರಹೊಮ್ಮಲಿ ಕನ್ನಡ
ನಯನದೊಳಗಿನ ನೋಟದಲ್ಲಿ ಕಂಗೊಳಿಸಲಿ ಕನ್ನಡ
ನಾಸಿಕದಲಿ ಸೌಗಂಧದ ಅಗರು ಪಸರಿಸಲಿ ಕನ್ನಡ
ತುಟಿಯಂಚಲಿ ಪುಟಿದುಬರಲಿ ಜೇನು ಸವಿಯ ಕನ್ನಡ
ನಾಲಿಗೆಯ ರುಚಿಯ ಪಾಕವಾಗಲಿ ಕನ್ನಡ
ಬಾಯಿತುಂಬ ಹೊಳೆಯಾಗಿ ಹರಿಯಲಿ ನುಡಿ ಮುತ್ತಿನ ಕನ್ನಡ
ಕಿವಿಯಲ್ಲಿ ರಿಂಘಣಿಸುತಿರಲಿ ಇಂಪು ಸೊಂಪಿನ ಕನ್ನಡ
ಕೈ ಬೆರಳುಗಳ ಅಂಚಿನಲ್ಲಿ ಸಾಹಿತ್ಯದ ಸಿರಿಯಾಗಲಿ ಕನ್ನಡ
ಶಿರದ ಹೊನ್ನ ಕಳಸವಾಗಿ ಉತ್ತುಂಗಕ್ಕೇರಲಿ ಕನ್ನಡ
ನಡೆ ನುಡಿಯಲಿ ಜಗವ ಮೆಟ್ಟಿನಿಲ್ಲಲಿ ಕನ್ನಡ
ತಾಯಿ ಭುವನೇಶ್ವರಿಯ ಮೊಗದಲ್ಲಿ ನಗುವತರಲಿ ಕನ್ನಡ.

Leave a Reply