ಮುಕ್ತ…ಮುಕ್ತ..
ಮೊದಮೊದಲು,
ನನ್ನದು ಜಿದ್ದಿನ ಸ್ವಭಾವವಿತ್ತು..
ಯಾವುದನ್ನೂ ಸುಲಭಕ್ಕೆ ಬಿಟ್ಟುಕೊಡಬಾರದೆಂಬ ಹಟವಿತ್ತು…
ಹಾಗೆ ಮಾಡುವದು ನನಗೂ ಕಷ್ಟವಾಗುತ್ತಿತ್ತು..
ಅಲ್ಲದೇ ಸಾಕಷ್ಟು ನೋವು ತಿನ್ನುವದೂ ಇತ್ತು…
‘ಆದರೂ ನನ್ನ ದಾರಿಯೇ ಸರಿ’ ..
ಎಂಬ ಭ್ರಮೆಯಿತ್ತು…
ಬದುಕಲ್ಲಿ ಏನೊಂದು ಕಳೆದು
ಕೊಂಡರೂ ‘ನನ್ನನ್ನೇ’ ಕಳಕೊಂಡಂತೆ ಎಂಬ
ಭಾವವಿತ್ತು..
ನನ್ನ ನಡೆ ನನ್ನನ್ನೇ ಬದಲಾಯಿಸುತ್ತಲಿದೆ
ಎಂಬುದೂ ತಿಳಿಯದಂತಿತ್ತು…
ಕೊನೆಗೊಂದು ದಿನ ಏನಾಯಿತೋ ಗೊತ್ತಿಲ್ಲ…
ಅದುವರೆಗೂ ಹಿಡಿದಿಟ್ಟ
ಹಟ ಬಿಟ್ಟುಕೊಟ್ಟೆ…
ಮುಷ್ಟಿ ಹಿಡಿತ ಸಡಿಲುಬಿಟ್ಟೆ..
ಒಮ್ಮಿಂದೊಮ್ಮೆಲೇ ಹಗುರವಾದ ಅನುಭವ..
ಕಳೆದುಕೊಳ್ಳಬಹುದೆಂಬ
ಭಯದ ಜಾಗದಲ್ಲಿ
‘ಕಳೆದದ್ದೇ ಉತ್ತಮ’ ವಾಯ್ತೆಂಬ ನಿರಾಳಭಾವ…
ಕೆಲ-ಸಂಬಂಧಗಳನ್ನು ಹಿಡಿದಿಡಲಾಗದೆಂಬ
ಸತ್ಯದ ಅವಿರ್ಭಾವ…
‘ಕೆಲವು ವ್ಯಕ್ತಿ-ಸಂಗತಿಗಳು
ಹೋಗಲೆಂದೇ ಬರುತ್ತವೆ,
ಕೆಲಪಾಠಗಳ ಕಲಿಸಿ
ಮರೆಯಾಗುತ್ತವೆ…’
ನಿಮ್ಮ ಮುಖದ ನಗು ಮಾಸುವಂಥ ಜನ_ಮನಗಳನ್ನು
ದೂರವಿಡುವದು ತಪ್ಪಲ್ಲ…
ನಿಮ್ಮ ಅತಿಮೂಲ್ಯ ಸಮಯವನ್ನು ಅದರಲ್ಲಿ
ಹಾಕಿ ತಪಿಸಬೇಕಿಲ್ಲ…
ಅಂಥ ನಷ್ಟ ಎಂದೆಂದಿಗೂ
‘ನಷ್ಟ’ ಅಲ್ಲವೇ ಅಲ್ಲ…!!!!!
( ERIN HANSON- ಅವರ ಇಂಗ್ಲಿಷ ಕವನದ ಭಾವಾನುವಾದ- ಕೃಷ್ಣಾ ಕೌಲಗಿ)
You must log in to post a comment.