ನಾಗರ ಪಂಚಮಿಯ ಶುಭಾಶಯಗಳು

ನಮನವು ಓ ಗೆಳೆಯ ಆಷಾಡ
ಶ್ರಾವಣದಾಗಮನದ ಸಂಭ್ರಮಕೆ
ಕವಿದಿರೆ ಸುತ್ತಲೂ ತಿಳಿಮೋಡ
ಪಂಚಮಿ ಕೋರಿದೆ ಸ್ವಾಗತವಿಂದು
ಹಸಿರಿದು ತೊಟ್ಟಿದೆ ಆಭರಣ
ಮನೆಮನೆಯಲಿ ಉದ್ದಕೂ ತೋರಣ
ಅಂಗಳದಲಿ ಬಣ್ಣದ ರಂಗೋಲಿಯ ನರ್ತನ
ತಂದಿದೆ ಹೆಂಗಳೆಯರಲಿ ಮಾಸೋತ್ಸವ
ತವರಿನ ಕರೆ ಮುತೈದೆಯರಿಗೆ
ಕಾತರ ಅಣ್ಣನು ತರುವ ಬಾಗಣಕೆ
ಹದಿಹರೆಯದವರಲಿ ಸಂಭ್ರಮವಿಂದು
ಹೆರಳಿಗೆ ಹೂವಿನ ಶೃಂಗಾರವಿಂದು
ಕಣ್ಣಿಗೆ ಕಾಡಿಗೆಯ ಬಡಿವಾರ
ಕೈಗಿದು ಬಳೆಗಳ ನವರಸದೌತಣ
ಕಾಲಲಿ ಗೆಜ್ಜೆಯ ಘಲ್‍ಘಲ್ ಗಾಯನ
ರೇಶಿಮೆ ಲಂಗಾ ಕುಪ್ಪಸ ತೊಟ್ಟು
ಕಾಣಿರೆ ಇಂದೇ ಕುವರಿಯರ ವೈಯಾರ
ಪುಟಾಣಿಗಳಿಗಿದು ಸಿಹಿ ಉಂಡೆಯ ಹಬ್ಬ
ಹೊಟ್ಟೆಯು ಅವರದು ದೊಡ್ಡ ದಿಬ್ಬ
ಹಂಚುತ ಚಕ್ಕುಲಿ ಉಂಡೆಗಳ
ಬೆಸೆಯುವ ಬೆಸುಗೆಯ ಈ ಹಬ್ಬ
ಮತ್ತೆ ಶೀಘ್ರವೇ ಬರಲಿ ಈ ಪಂಚಮಿ ಹಬ್ಬ

– ಉಮಾ ಭಾತಖಂಡೆ

2 Comments

  1. ನಿಮಗೂ ನಾಗರ ಪಂಚಮಿಯ ಶುಭಾಶಯಗಳು.

    1. ಧನ್ಯವಾದಗಳು….

Leave a Reply