ಜನುಮಕೊಬ್ಬ ಗೆಳೆಯ ಸಿಕ್ಕನವ್ವ ಎನಗ
ಏನಂತ ಹೇಳಲಿ ಅವ ಹೆಂಗಂತ ನಾ ನಿಮಗ
ಎದರ ಬದರ ಇದ್ದರೂ ನೋಡದ ಹಂಗ ಇರತಾನ
ಮನದ ಮೂಲ್ಯಾಗ ಸುಮ್ಮನ ಕೂತಾನ
ಜ್ವರ ನನಗ ಬಂದಾರ ಬಿಸಿ ಅವಗ ತಟ್ಟಿತವ್ವ
ಕೆಮ್ಮಿದರ ಗೆಳೆಯನ ಗಂಟಲ ನೋವಾದೀತ
ದುಃಖ ನನಗಾದರ ಮನಸಿನಾಗ ಭಾಳ ಬೆಂದಾನ
ನಾ ಮುನಿಸಾದರ ತಾ ನಿದ್ದೀಗೆಡುತಾನ
ಮರಿಯಾಗಿ ನಿಂತು ಕಷ್ಟಕ್ಕ ಹೆಗಲು ಕೊಡತಾನ
ನನ್ನ ದನಿಗೆ ತಾ ಸ್ವರವಾಗಿ ನಿಂತಾನ ನನ ಗೆಳೆಯ
ನಾ ದಿನದಿನಕ ಬೆಲಿಯಲಿ ಅಂತ ಹರಸ್ಯನ
ಕತ್ತಲ ದಿವಸದಿ ಬೆಳಕಾಗಿ ಬಂದಾನ ಎನ್ನೊಳಗ
ದುಃಖವ ಮರೆಸಿ ನಗಿಯಾ ತಂದಾನ
ಗೆಳೆತನ ಅಂದರ ಹಿಂಗ ಇರತೈತಿ ಅಂತ ಕಲಸ್ಯಾನ
ಉಮಾ ಭಾತಖಂಡೆ
You must log in to post a comment.