ನಿಜ ಹೇಳಿ.

ನಿಜ ಹೇಳಿ.

ಆಚರಿಸಿದೆವು ಈ ಒಂದು ದಿನ
ಹೆಸರಿಟ್ಟು ಮಹಿಳಾ ದಿನ
ಇನ್ನೂ ಕಳೆದಿರಲಿಲ್ಲ ಪೂರ್ಣ ಒಂದು ದಿನ
ವಾಟ್ಸಾಪ್ನಲ್ಲಿ ಓದಿದೆ ಒಂದು ವಾಕ್ಯನ
ಅದರಲಿತ್ತು ಮುಗಿತು ನಿಮ್ಮ ದಿನ ತಿಕ್ರೀ ಭಾಂಡೆನ
ಕೊರುವೀರಿ ಮಹಿಳಾ ದಿನದಂದು ಶುಭಾಶಯ
ಉರುಹುವುದು ಒಂದು ಆಚರಣೆ ಮತ್ತೊಂದು
ಇದುವೇ ನಿಮ್ಮ ಶುಭಾಶಯ? ನಿಜ ಹೇಳಿ?
ಮುಂದೆ ಸಬಲೆ ಹಿಂದೆ ಅಬಲೆ ಇನ್ನೂ ಆಗಿಲ್ಲವೇ ಮಹಿಳೆ?
ಮುಂದಡಿ ಇಡಲು ಹೊರಟಾಗ ಕಾಲು ಕಟ್ಟೀಲ್ಲವೆ?
ಕೈ ಬಿಸಿ ಮೇಲೇಳುವ ಗರಿಗಳು ಬಂದಾಗ
ಕತ್ತರಿಸ ಲಿಲ್ಲವೇ ಅಮಾಯಕವಾಗಿ ಸಾಧನೆಯ ಗರಿಗಳ?
ಮೌನವಾಗಿ ಸಹಿಸುತಿಲ್ಲವೇ ಹೇಳಲಾರದೆ ಆಸೆಗಳ
ತನ್ನವರ ಪರರ ಶೋಷಣೆಗೆ ನಲುಗಿಲ್ಲವೇ ಈ ಜೀವ
ಒಂದಾಡಿದರೆ ಹೆಚ್ಚು ಒಂದಾಡಿದರೆ ಕಡಿಮೆ
ಮಾತು ಉರುಹದಂತೆ ಮೂಕವಾಗಿಸಿಲ್ಲವೆ ದೈನ್ಯತೆ ಯಲಿ
ದಿನ ದಿನವೂ ಶೋಷಣೆಗೆ ಬಲಿ ವಾರಕಳೆವುದರಲ್ಲಿ
ಅತ್ಯಾಚಾರದ ಕೂಪದಲ್ಲಿ ನರಳುತ್ತಿಲ್ಲವೆ ?
ನೂರು ಕನಸು ಒಡೆದು ಕನ್ನಡಿ ಚೂರಾಗಿಲ್ಲವೆ?
ಪರರ ಸುಖಕ್ಕಾಗಿ, ತ್ಯಾಗಮಯಿ ಯಾಗಿ
ಎದೆ ಬಿರಿದು ಒಡೆಯಲಿಲ್ಲವೆ?
ನೋವುಗಳ ಒಡ್ಡುವಾಗ ನೆನಪಾಗಿಲ್ಲವೇ ಮಹಿಳಾ ದಿನ?
ಮಮತೆ,ಸಹನೆ,ಕರುಣೆಯ ಸಾಕಾರ ಮೂರ್ತಿ ಮಹಿಳೆ
ಒಲಿದರೆ ನಾರಿ ಮುನಿದರೆ ಮಾರಿಯೂ ನೀವು ಕೇಳಿಲ್ಲವೇ?
ಬೇಡ ಅಪಹಾಸ್ಯ ಹೆಣ್ಣು ಎಂಬ ಅರ್ಥಕೆ!
ದಿನ ದಿನವೂ ಗೌರವ ಆದರಗಳು ದೊರೆತಲ್ಲಿ ಅದುವೇ ನಿಜ ಮಹಿಳಾ ದಿನಾಚರಣೆ.

ಉಮಾ

Leave a Reply