ಒಲುಮೆ

ಒಲುಮೆ

ನಿನ್ನೊಲುಮೆಯಲಿ ಬಂಧಿ ಆ ರಾಧೆ
ಮಧುರ ಮುರುಳಿ ನಾದಕೆ ಸೋತೆ
ತಲ್ಲಿನತೆಯಲಿ ತಿಳಿಯದೇ ಭಾವಪರವಶಳಾದೆ
ಕೊಳಲುಳಿಯ ಮತ್ತಿನಲ್ಲಿ ಎದೆಗೆ ಶಿರವನಿಟ್ಟೆ
ತನು ಮನವನೆಲ್ಲ ಧಾರೆ ಎರೆದೆ ನಿಷ್ಠೆಯಲಿ
ಹೃದಯ ಬಡಿತದಲಿ ಉಸಿರಿನಲ್ಲಿ ಒಂದಾಗಿ
ಕೃಷ್ಣ ನಾನೇ ನೀನಾಗಿ ನೀನೆ ನಾನಾಗಿ ಮನ ಒಂದಾಗಿ

Leave a Reply