ಪ್ರೇಮ ಚುಂಬನ
ಪ್ರೇಮ- ಚುಂಬನವಿಂದು ಮಾರಾಟ ಸರಕು..
ಎಲ್ಲರಿಗೂ ಅವರವರ ಪ್ರಚಾರ ಬೇಕು.
ಎಷ್ಟೊಂದು ಪ್ರಶ್ನೆಗಳು ಭಾರತದ ಮುಂದೆ…
ಕಾಳುಗಳ ತೂರಿಸಿ ಹೊಟ್ಟಿನಾ ಹಿಂದೆ…
ಪ್ರತಿಮೆ
ಒಬ್ಬೊಬ್ಬ ಮಹಾತ್ಮಗೂ ಒಂದೊಂದು ಪ್ರತಿಮೆ,
ಕೋಟಿಯಲಿ ಹಣದ ಹೊಳೆ ಹರಿಸುವದೇ ಹೆಮ್ಮೆ…
ಬೇಕಿಲ್ಲ ಅವರೆಲ್ಲ ನಾಮಬಲ ಸಾಕು,
ನಮ್ಮೆಲ್ಲ ಆಟಕ್ಕೆ ಅವರು – ಕಲ್ಲಾಗಬೇಕು…
You must log in to post a comment.