ಸಹಜ ಕೃಷಿ

ಸಹಜ ಕೃಷಿ

ಭೂಮಿ ಒಗೆಯುತ್ತಾ
ಹೋದಂತೆ ನೇಗಿಲು
ಆಳದಿಂದ ಮೇಲೆದ್ದ ಮಣ್ಣು
ಎರಡೂ ಬದಿಗೆ ಹೊರಳಿ
ಹೊರ ವಾತಾವರಣಕ್ಕೆ
ಅನಾವರಣಗೊಳ್ಳುತ್ತಾ
ಹೊಸ ಚೇತನದ ನಿರ್ಮಿತಿಗೆ
ಜೀವ ತಳೆವಂತೆ,
ಬಯಕೆಗಳೇ ಬಲೆಯಾಗಿ
ಬಿಗಿಗೊಂಡ ಮನವನುತ್ತುತ್ತ
ಅಷ್ಟೇ ಉತ್ಸಾಹ ಸ್ಪೂರ್ತಿ,
ನಂಬಿಕೆ ಕನಸುಗಳ ಬೀಜಬಿತ್ತಿ
ದಿಗಿಲು, ಹಠ, ಗೊಂದಲ,
ನಿರಾಶಾಭಾವಗಳ ಕಳೆಕಿತ್ತು
ಮನದ ತಿಳಿಬಿಳಿಯ ಕಳೆಯದೇ
ಭಾವನಾತ್ಮಕ ಸೆಲೆ ಚಿಮ್ಮುವ
ನೈರ್ಸಗಿಕ ಕೃಷಿಯು ಒಡಮೂಡಿ ಬರಲಿ

ಹೊಸ್ಮನೆ ಮುತ್ತು

Leave a Reply