ಸೃಷ್ಟಿಕರ್ತ

ಸೃಷ್ಟಿಕರ್ತ ಮನುಷ್ಯ ಜನ್ಮ ನೀಡಿದನಂದು
ಜೀವನ ಅನುಭವದ ಸವಿ ಸವೆಯಲೇಂದು
ಬಂದವರೆಲ್ಲ ಹೋಗಬೇಕು ಒಲವತುಂಬಿ ಕೊಂಡು
ಜಂಜಾಟ ಸೆಣಸಾಟ ಸಿರಿತನ ಬಡತನ ಎಲ್ಲ ಇಹುದು
ಅದಕೂ ಮಿಗಿಲು ಕರ್ತವ್ಯ ಪಾಲನೆ ಕೂಡಿನಡೆವುದು
ಇಹ ಪಥದಲ್ಲಿ ಸ್ವರ್ಗ ನರಕ ಕೂಡಿ ಇರುವುದು
ನಿಷ್ಠೆಯಿಂದಲಿ ಬದುಕು ಸವೆದರೆ ಎಲ್ಲ ಇಲ್ಲೆ ಸಿಗುವುದು
ಬಗೆ ಬಗೆ ಕಷ್ಟ ಸುಖ ಶಾಂತಿ ಗೊಂದಲಗಳಿಹುದು
ಆಗೊಮ್ಮೆ ಈಗೊಮ್ಮೆ ಈ ಜೀವನವು ಬೇಸರ ತರುವುದು
ಆದರೂ ದೈವ ಒಂದು ಮುಖ್ಯ ಕಾಯಕ ನೀಡಿರುವುದು
ಹುಟ್ಟು ಸಾವು ಎರಡರ ಮಧ್ಯೆ ಸಾಧನೆ ಯೊಂದಿರುವುದು
ಆಗ ಮಾತ್ರವೇ ಅಳಿವು ಅಂತ್ಯದ ನಡುವೆ ಹೆಸರು ಉಳಿವುದು
ಉಳಿವಿನಲ್ಲಿ ಕರುಣೆ ಪ್ರೀತಿ ಮಮತೆ ಅನುಕಂಪ ತುಂಬಿಹುದು
ಮಿಥ್ಯ ಆಲೋಚನೆಗಳ ಆಚೆ ಬಂದು ಸತ್ಯದೆಡೆ ಗುರಿಯನಿಡುವುದು
ಇರುವುದರೊಳಗೆ ಅರಿವು ಮೂಡಲು ಮುಖ್ಯ ಕಾಯಕ ಕಾಣುವುದು
ಜನುಮ ಸಾರ್ಥಕವಾಗುವುದು ಸೃಷ್ಟಿ ತೃಪ್ತಿ ಪಡುವುದು.

ಉಮಾ ಭಾತಖಂಡೆ.

Leave a Reply