ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3

ಭಾಗ 3:-

ಪಿತೂರಿ ಸಿದ್ಧಾಂತ ಅಥವಾ ಕಾನ್ಸ್ಪಿರೆಸಿ ಥಿಯರಿ ಎಂದರೇನು? ಆಂಗ್ಲ ಮಾಹಿತಿಯ ಕನ್ನಡ ಅನುವಾದ!

ಆಕಾಶದಿಂದ ಧರೆಗಿಳಿದ ’ಗೊಂಬೆ’?

ಮಂಗಳ ಗ್ರಹದ ಉಲ್ಲೇಖ ನಮ್ಮ ಆದಿಕಾಲದ ನಾಗರೀಕತೆಗಳಲ್ಲಿ, ಗುಹೆಯಲ್ಲಿ ಕಲ್ಲಲ್ಲಿ ಕಡೆದ ಚಿತ್ರಗಳಲ್ಲಿ, ಈಜಿಪ್ಟಿನ ಪುರಾಣಗಳಲ್ಲಿ, ಗ್ರೀಕ್ ಮತ್ತು ಬೈಬಲ್ಲಿನ ಉಪಕಥೆಗಳಲ್ಲಿ ಹೇರಳವಾಗಿ ಇವೆ:

ಮಾರ್ಸ್ ಗ್ರಹವನ್ನು God Of War ಎಂದೇ ಕರೆದಿದ್ದರು. ಅಲ್ಲಿಯ ದೇವತೆಗಳು, ದೇವ ಮಾನವರು , ಇಲ್ಲಿ ಬಂದು ನಮಗೆಲ್ಲ ಕಲಿಸಿಕೊಟ್ಟರು, ನಮ್ಮ ಜೀವನ ಹಸನಾಗಿಸಿದರು, ನಾವು ಅವರನ್ನು ಆರಾಧಿಸುತ್ತೇವೆ ಎನ್ನುತ್ತವೆ ಈ ಲೆಜೆಂಡುಗಳು,

ಅಲ್ಲಿನವರ ಪ್ರತ್ಯೇಕ ವರ್ಣನೆ ನಮಗೆ ಇಲ್ಲಿ ಆದಿ ಮಾನವರಿಗೆ ಹೇಗೆ ಸಿಕ್ಕಿತು?

.. ಉತ್ತರ ಬಹಳ ಸರಳ.. ಅವರೇ ಇಲ್ಲಿಗೆ ಬಂದಿದ್ದರು!

ಇಲ್ಲಿ ನೋಡಿ ಒಂದು ಮಂಗಳ ಗ್ರಹದಿಂದ ಓಡಿಬಂದವರ ಕಥಾಚಿತ್ರ:

ಅಲ್ಲೊಂದು ಪರಮಾಣು ಯುದ್ಧ ನಡೆದು ಮಂಗಳವೇ ಸರ್ವನಾಶವಾದ ಬಗ್ಗೆ ಕುರುಹುಗಳು ಸಿಕ್ಕಿದ್ದರೂ ನಾವು ಪರೀಕ್ಷಿಸುತ್ತಿಲ್ಲವೆ?

 

 


ಈ ಮೇಲಿನ ಪುರಾತನ ಗುಹೆ ಕೆತ್ತನೆಯನ್ನು ಗಮನಿಸಿ ..

ತಲೆಗೆ ಶಿರಸ್ತ್ರಾಣ, ಕೈಯಲ್ಲಿ ಗನ್ ತರಹದ ಆಯುಧ: ಟಾರ್ಚ್? ಆಗಿನ ಕಾಲದ ಗಗನ ಯಾತ್ರಿಗಳ ತರಹ?

ಆದಿ ಮಾನವರಾದವರು ಹೀಗೆ ಹೇಗೆ ಬರೆಯಲು ಸಾಧ್ಯ. ಯಾರನ್ನು ನೋಡಿ ಹೀಗೆ ಕಲ್ಪಿಸಿಕೊಳ್ಳಲು ಸಾಧ್ಯ, ಅಥವಾ ನಮ್ಮನ್ನೆಲ್ಲಾ ಶತ ಶತಮಾನದವರೆಗೂ ಏಮಾರಿಸಬೇಕೆಂಬ ದುರುದ್ದೇಶದಿಂದ ಆ ಮುಗ್ಧರು ಹೀಗೆ ಚಿತ್ರಿಸಿರಲು ಸಾಧ್ಯವೆ?. ಇರಲಾರದು! ಸಾಮಾನ್ಯವಾಗಿ ಜೀವಂತ ವಸ್ತುಗಳನ್ನು- ಮಾನವರನ್ನು ಪ್ರಾಣಿಗಳನ್ನೂ ಅಲ್ಲಿ ಅವರಿಗೆ ನಡೆದ ಸಾಮಾಜಿಕ ಚಟುವಟಿಕೆಗಳ ಮೂಲಕ ತಾನೆ ಈ ಕೆತ್ತನೆಗಳು ತೋರಿಸುತ್ತಿದ್ದವು?

ಅಂದಮೇಲೆ ಹಾಗೆ ತಲೆಗೆ ವಿಚಿತ್ರ ಶಿರಸ್ತ್ರಾಣ ಧರಿಸಿದ ಈ ದೇವ ಮಾನವರು ಅಂದರೆ ಅಸ್ಟ್ರೋನಾಟ್ಸ್ ಕೈಯಲ್ಲಿ ಲೇಸರ್ ಗನ್ ಹಿಡಿದು ಬಂದಿರಲೇ ಬೇಕಲ್ಲ… ಸರಿ ಹಾಗಾದರೆ ಈ ರೀತಿಯ ವಿಶೇಷ ಮಾನವರು ಆಕಾಶದಿಂದ ಧರೆಗಿಳಿದರಂತೆ ಅನ್ನೋಣ.
ಆಕಾಶದಿಂದ ನೆಲಕ್ಕಿಳಿದರು ಎಂಬ ತತ್ವ , ಐಡಿಯಾ ಆ ಆದಿ ಕಾಲದ ಮುಗ್ಧರಿಗೆ ಬಂದಿದ್ದಾದರೂ ಹೇಗೆ?..

ಆಗ ಏನೂ ವಿಮಾನಗಳು ಸಹಾ ಇರಲಿಲ್ಲವಲ್ಲ. ಭೂಮಿಯನ್ನು ಸೀಳಿಕೊಂಡು ಕೆಳೆಗಿಂದ ಮೇಲೆ ಬಂದರು ಏಕಿಲ್ಲ? ಆಕಾಶದಿಂದ ಇಳಿಯುವುದೇ ಏಕೆ?” ಯೋಚಿಸಿ! ಅದಕ್ಕೆ ಅವರು ಹಾಗೆ ಸತ್ಯವನ್ನೇ ವರದಿ ಮಾಡಿದ್ದಾರೆ. ನೀವು ಯಾವುದೇ ಪುರಾಣ ಗ್ರಂಥಗಳನ್ನು ತೆಗೆದುಕೊಳ್ಳಿ ದೇವತೆಗಳ ವರ್ಣನೆ ಸಾಮಾನ್ಯವಾಗಿ ಹೀಗಿರುತ್ತದೆ:

ತಮ್ಮ ವಿಮಾನದಲ್ಲಿ ಸರ್ರೆಂದು ಬಂದಿಳಿದರು, ಕ್ಷಣಾರ್ಧದಲ್ಲಿ ಅಂತರ್ಧಾನವಾದರು. ತಮ್ಮ ಲೋಕದಿಂದ ಇಲ್ಲಿಗೆ ಆಕಾಶಮಾರ್ಗವಾಗಿ ಬಂದು ಹೋಗುತ್ತಿದ್ದರು. ಇವರಿಗೆ ನಮಗಿಲ್ಲದ ವಿಶೇಷ ಶಕ್ತಿಗಳು ಇದ್ದವು. ಕ್ರೂರ ಪ್ರಾಣಿಗಳನ್ನೂ ವೈರಿಗಳನ್ನೂ ತಮ್ಮ ಬಿಲ್ಲು ಬಾಣ ತರಹದ ಬೆಳಕು ಬೆಂಕಿ ಉಗುಳುವ ಆಯುಧದ ಮೂಲಕ ಮಾಯಾಜಾಲ ದಂತೆ ಬಗ್ಗು ಬಡಿಯುತ್ತಿದ್ದರು.. ಬೆಳಕಿನಂತಾ ಮಿಂಚಿನಂತೆ ಸಂಚಾರ ಮಾಡುವರು. ನಮಗೆ ಗೊತ್ತಿಲ್ಲದ ಎಲ್ಲವನ್ನೂ ಸೃಷ್ಟಿ ಮಾಡಿ ಕೊಡಬಲ್ಲರು.. ಇತ್ಯಾದಿ ಇತ್ಯಾದಿ…

ಇದೆಲ್ಲಾ ವಿಶ್ವದ ಎಲ್ಲಾ ನಾಗರೀಕತೆಯ ಪುರಾಣಗಳಲ್ಲೂ ಕಾಮನ್ ಆಗಿ ಬಂದಿದ್ದಾದರೂ ಹೇಗೆ?..ಆಗಿನವರು ದೇಶ ವಿದೇಶಗಳಿಗ್ ಸಂಚರಿಸಿ ಸುದ್ದಿ ಹರಡುವರೂ ಆಗಿರಲಿಲ್ಲ ಇನ್ನೂ ಈಜಿಪ್ಟಿನವರು ಫಾರೋಗಳಲ ಕಾಲದಲ್ಲಿ, ಅನಂತರ ಮೆಸೊಪೋಟೇಮೀಯರು ಹೇಳಿದ್ದು ಕೇಳಿ: ಈ ಹೊರಗಿನಿಂದ ಬಂದಿಳಿದ ದೇವರುಗಳು ನಮಗೆ ರಾಜರಾದರು!ನಮಗೆ ವ್ಯವಸಾಯ ಮಾಡುವುದು ಹೇಳಿಕೊಟ್ಟರು ಆಗಲೆ ನಾವು ಆಹಾರ ಬೆಳೆದೆವು,. ಬಟ್ಟೆ ಮಾಡಿ ದರಿಸುವುದು ಹೇಳಿಕೊಟ್ಟರು. ನಮಗೆ ಮಾತು ಭಾಷೆ, ಚಿತ್ರಕಲೆ, ಹಾಡು ಎಲ್ಲಾ ಹೇಳಿಕೊಟ್ಟರು. ಬರೆಯುವುದನ್ನು ಕಲಿತೆವು!

ಯಾರಪ್ಪ ನಮ್ಮ ಪುರಾತನರನ್ನು ಹೀಗೆ ಉದ್ಧಾರ ಮಾಡಿದವರು?… ಅವರೆಲ್ಲಿಂದಲೋ ಇದೆಲ್ಲಾ ಕಾಲಾನುಕಾಲದಲ್ಲಿ ಕಲಿತಿದ್ದನ್ನು ಇಲ್ಲಿನ ಏನೂ ತಿಳಿಯದ ಶಿಲಾಯುಗದ ಒರಟು ವರ್ತನೆಯೆ ಆದಿಮಾನವರಿಗೆ ಹೇಳಿಕೊಟ್ಟರು.. ಹಾಗಾಗಿ ಇವರೇ ಅವರ ಪಾಲಿನ ದೇವತೆಗಳಾದರು! ಇದರಲ್ಲಿ ನಂಬಲಸಾದ್ಯವಾದ, ಸುಳ್ಳಂತೂ ನನಗೆ ಗೋಚರಿಸುತ್ತಿಲ್ಲ!

ನಾವು ಕೂಡಾ ನಮಗೆ ಸಮಯಕ್ಕೆ ಸಹಾಯ ಮಾಡಿದವರಿಗೆ “ದೇವರಂತೆ ಬಂದು ಮಾಡಿಕೊಟ್ಟೆಯಪ್ಪಾ!” ಎನ್ನುವುದು ಏಕೆ?
ಅದು ನಡೆದಿದ್ದೇ ಹಾಗೆ…ಅದು ಕಲ್ಪಿತ ಪುರಾಣದ ಬಂಡಲ್ ಅಲ್ಲ…ಸತ್ಯವೇ ಹಾಗಾದರೆ! ಜಗತ್ತನ್ನು ಸೃಷ್ಟಿಸಿದ ಭಗವಂತನಿಗೆ ನಾವು ಇಲ್ಲಿ ಹೋಲಿಸಬೇಕಿಲ್ಲ..ಅದು ಕಣ್ಣಿಗೆ ಕಾಣದ ಜಗನ್ನಿಯಾಮಕ ಶಕ್ತಿ.

ಆದರೆ ಇವರೇ ಬೇರೆ…

ಇವರೇ ಯಾಕೆ ಆದಿಕಾಲದ ಏಂಜೆಲ್ಸ್, ಯಕ್ಷ, ಕಿನ್ನರರು, ಕಿಂಪುರುಷರು, ಗಂಧರ್ವರು ಆಗಿರಬಾರದು? ಅವರೆಲ್ಲಾ ಇಲ್ಲಿಗೆ ಬಂದು ನಮ್ಮಲ್ಲಿ ಬೆರೆತು ಕೆಲಕಾಲದ ನಂತರ ತಂತಮ್ಮ ಲೋಕಕ್ಕೆ ಹಾರಿಹೋಗುತ್ತಿದ್ದರಲ್ಲಾ..?

ಹಾಗೆಯೂ ಈ ವರ್ಣನೆಗಳು ಬಂದಿರಬಹುದು. ಈ ರೀತಿ ವಾದವನ್ನು ಹಲವು ವಿಜ್ಞಾನಿಗಳು ಸಂಶೋಧಕರು, ಪ್ರೊಫೆಸರುಗಳು, ಮೇಧಾವಿಗಳು ಮುಂದಿಟ್ಟಿದ್ದಾರೆ.

ಅದನ್ನು ನಾನೀಗ ಕನ್ನಡದಲ್ಲಿ ಬರೆದಿದ್ದೇನೆ ಅಷ್ಟೇ. ನನ್ನದೇ ಆದ ಐಡಿಯಾಗಳೇನೂ ಇಲ್ಲ! ಇವರನ್ನೆಲ್ಲಾ ಕಾನ್ಸ್ಪಿರೆಸಿ ಥಿಯರಿಗರು- ಅಂದರೆ ಪಿತೂರಿ ಸಿದ್ಧಾಂತಿಗಳು, ರಹಸ್ಯವಾದಿಗಳು ಎಂದು ಸರಕಾರಿ ನಿಯಮಾವಳಿ ಸಂಕೋಲೆಗಳಲ್ಲಿ ಬಂಧಿತ ವಿಜ್ಞಾನ ಕಮ್ಯುನಿಟಿಯವರು ಕರೆಯುತ್ತಾರೆ, ಜರಿಯುತ್ತಾರೆ.

ಆದರೆ ಹಲವು ನಾಸಾ ವಿಜ್ಞಾನಿಗಳು, ಪ್ರೊಫೆಸರುಳು, ಏರ್ ಫೋರ್ಸ್ ಅಧಿಕಾರಿಗಳು ಒಮ್ಮೆ ನಿವೃತ್ತರಾದರೆನ್ನಿ. ಈ ಕಟ್ಟುಪಾಡು ಮುರಿದು ಎಲ್ಲವನ್ನು ಬಹಿರಂಗ ಪಡಿಸುತ್ತಿದ್ದಾರೆ.

ಇವರನ್ನೇ “ವಿಸಲ್ ಬ್ಲೋಯರ್ಸ್ “ಎನ್ನುತ್ತೇವೆ! ಡಾ, ಜಾನ್ ಬ್ರಾಂಡೆನ್ ಬರ್ಗ್ ಎಂಬ ಹಿರಿಯ ಸಂಶೋಧಕ ಲೇಖಕ ಹಲವಾರು ಬೆಸ್ಟ್ ಸೆಲ್ಲರ್ ಪುಸ್ತಕಗಳನ್ನು ಬರೆದಿರುವವರು ಹೀಗೆನ್ನುತ್ತಾರೆ:

ಈ ಪತ್ರಿಕಾ ಲೇಖನವನ್ನೂ ಮರೆಯದೇ ಓದಿ:

https://www.dailymail.co.uk/sciencetech/article-2990305/Did-ancient-nuclear-war-kill-life-Mars-Conspiracy-theorists-claim-mushroom-cloud-red-planet.html

ಅವರ ಪ್ರಕಾರ ಮಂಗಳನಲ್ಲಿ ಸೈಡೋನಿಯಾ ಮತ್ತು ಉಟೋಪಿಯಾ/ ಗೆಲಾಕ್ಸಿಯಾ ಎಂಬ ಎರಡು ಪ್ರದೇಶಗಳಿವೆ. ಅದನ್ನು ನಾವೇ ಹೆಸರಿಟ್ಟಿದ್ದು. ಅಲ್ಲಿ ಈಗಿ ಸಹಾ ದೊಡ್ಡ ಪ್ರಮಾಣದ ಹೊಗೆಯುಕ್ಕುತ್ತಿದೆ ಎನ್ನುತ್ತಾರೆ ಅಲ್ಲಿ ಎರಡು ಬೃಹತ್ ಥರ್ಮೋ ನ್ಯುಕ್ಲಿಯರ್ ಸ್ಪೋಟಗಳಾಗಿವೆ. ಯಾವ ಕಾಲದಲ್ಲಿ ಯಾರು ಪರಮಾಣು ಬಾಂಬ್ ಮಳೆ ಸುರಿಸಿ ಇಲ್ಲಿನವರ ನಾಮಾವಶೇಷ ಮಾಡಿದರಪ್ಪಾ ಎನಿಸುವುದಿಲ್ಲವೆ? …

A scientist is to present his theory that ancient life on Mars was massacred. Dr Brandenburg is giving a talk on his research tomorrow in Illinois at the American Physical Society. He says there is evidence for two nuclear explosions on Mars (image from his paper shown

ಅಯ್ಯೋ ಹಲವು ಬಿಲಿಯನ್ -ದಶಕೋಟಿ ವರ್ಷಗಳ ಹಿಂದೆ ಯಾರ ಬಳಿ ಇವೆಲ್ಲಾ ಇದ್ದವು?

(ಈಗ ಅಲ್ಲೇ ಸುತ್ತುತ್ತಾ ಪತ್ತೆ ಮಾಡುತ್ತಿವೆ ಅಮೆರಿಕಾ ಕಳಿಸಿದ ನಾಸಾ ದವರ ಆಪರ್ಚುನಿಟಿ ಮತ್ತು ಕ್ಯೂರಿಯೋಸಿಟಿ ರೋವರುಗಳು.. ಏಕೆ ನಮಗೇನೋ ಶಂಕೆಯಿದೆಯೆ ಆ ಸ್ಥಳದ ಬಗ್ಗೆ. ಏನಾದರೂ ಸಿಗಬಹುದೆಂದು? ಸ್ವಾತಿ ಮೋಹನ್ ಹೇಳಿಕೆ ಓದಿ ಈ ಸಂಚಿಕೆಯ ಕೊನೆಯಲ್ಲಿ) ಹಾಗಾದರೆ ನಾವೇ ಈಗ ಎಲ್ಲಾ ಕಂಡುಹಿಡಿದೆವೆಂದು ಕೊಚ್ಚಿಕೊಳ್ಳಬೇಕಾದ್ದೇನೂ ಇಲ್ಲ

ಕಾಲಚಕ್ರದಲ್ಲಿ ಎಲ್ಲಾ ಬೆಳವಣಿಗೆ, ಪ್ರಗತಿ ಹೊಂದಿದ ಜನಜೀವನ, ಸ್ಥಳಗಳೂ ಕೊನೆಗೆ ಸರ್ವನಾಶವೂ ಆಗಿ ಮತ್ತೆ ಮತ್ತೆ ಜೀವ ಅಲ್ಲಿಲ್ಲಿ ಹುಟ್ಟುತ್ತಿದೆ, ಪುನರ್ಜೀವ ಪಡೆಯುತ್ತಿದೆ ..

ಸರಿ ಅದು ಹಾಗಿರಲಿ!

ಆ ಪರಮಾಣು ಸ್ಪೋಟಗಳಾದ ಕಡೆ ಏನು ದೊರಕಿದೆ ಇದುವರೆಗೆ. ನಾಸಾದವರೇ ಹೇಳುವಂತೆ-

Xenon-129 in the Martian atmosphere, and uranium and thorium on the surface, spotted by Nasa’s Mars Odyssey spacecraft.

ಅಂದರೆ ಪರಮಾಣು ಸ್ಪೋಟವಾದಾಗ ದೊರೆಯುವಂತಾ ರಾಸಾಯನಿಕ ಕುರುಹುಗಳು ಇಲ್ಲಿ ದಂಡಿಯಾಗಿ ಸಿಗುತ್ತಿವೆ.

ಜ಼ೆನಾನ್, ಥೋರಿಯಂ ಮತ್ತು ಯುರೇನಿಯಮ್! ಯಾಕೆ ಇವೆ, ಅದು ನಿರ್ಜನ ನೆಲ ತಾನೆ? ’

ಹಾಗಿರಲಿಕ್ಕಿಲ್ಲ. ಮುಂಚೆ ಯಾರೋ ಇದ್ದರೆ?

ಯಾರು ಯಾರು… ನೀ ಯಾರು?

ಜತೆಗೆ ಇವು ಸಹಜವಾಗಿ ಸಿಗುವ ರಾಸಾಯನಿಕ ವಸ್ತುಗಳಲ್ಲ. ಅಣು ಸ್ಪೋಟವಾದರೆ ಬರುವ ಬೈ ಪ್ರಾಡಕ್ಟ್ಸ್! ಉಪವಸ್ತುಗಳು…

ಇಲ್ಲಿನವರೆಂದು ಹೇಳಿದವರ- ಸಾಂಸ್ಕೃತಿಕ, ಶಿಲ್ಪಕಲೆಯ, ಕಟ್ಟಡಗಳು ಭಿನ್ನವಾದ ಪಳೆಯುಳಿಕೆ ಚಿತ್ರಗಳನ್ನು ನಾವು ಹಿಂದಿನ ಸಂಚಿಕೆಯಲ್ಲಿ ನೋಡಿದೆವು ಪಿರಮಿಡ್ಡುಗಳ ಪಿತಾಮಹರೇ ಇವರು, ಸ್ಫಿಂಕ್ಸ್ ಮಾದರಿಯ ಮುಖಗಳನ್ನು ಕೆತ್ತಬಲ್ಲವರು ಈಜಿಪ್ಟಿಗೆ ಬಂದಿಳಿದಿರಬಹುದು. ಮಂಗಳ ವಾಸಿಗಳು!. ಅವರೇ ತಮ್ಮ ಗ್ರಹ ನಾಶವಾಗಿ ಬರಡಾದಾಗ ಗಗನ ನೌಕೆಯಲ್ಲಿ ಅತಿ ಹತ್ತಿರದ ಭೂಮಿಗ್ರಹವನ್ನು ಕಂಡರು. ಬಂದು ನೆಲೆಸಿದರು. ಇಲ್ಲಿ ಆಗ ಶಿಲಾಯುಗ ನಡೆಯುತಿತ್ತು ಆದಿಮಾನವರು ಕಲ್ಲುಗಳನ್ನು ಉಜ್ಜಿ ಬೆಂಕಿ ಹಚ್ಚುತ್ತಿದ್ದರೋ ಏನೋ, ಹಸಿ ಪ್ರಾಣಿ ಮಾಂಸ ತಿಂದು ಬೆತ್ತಲೆ ಓಡಾಡುತ್ತಿದ್ದವರೋ ಏನೋ?,.. ಏನೂ ಕಂಡರಿಯದ ಇವರ ಮುಂದೆ UFO ನಲ್ಲಿ ಅನ್ಯಗ್ರಹ ವಾಸಿಗಳು ಈಗಿನ ಅಸ್ಟೋನಾಟ್ಸ್ ತರಹ ಬಂದು ಇಳಿದರೆ ಅವರಿಗೆ ಹೇಗಾಗಿರಬೇಡ?

ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಅವರು ಹೇಳಿಕೊಟ್ಟಿದ್ದೆಲ್ಲಾ ಕಲಿತರಬೇಕು. ಅವರು ನಮ್ಮ ಜನದ ಜತೆಗೆ ಬೆರೆತೂ ಹೋಗಿ ಮುಂದಿನ ಮಿಶ್ರ ಪೀಳಿಗೆಯೂ ಬಂದಿರಬೆಕು.. ಅವರೆಲ್ಲಾ ಗಂಗಾ- ಸಿಂಧೂ ನದಿ, ಅಮೆಜ಼ಾನ್, ಅರೇಬಿಯಾ, ದಕ್ಷಿಣ ಅಮೇರಿಕಾ, ಯುರೋಪ್ ಕಡೆಗೆ ಹೋಗಿ ಹೋಗಿ ಬೆರೆಯುತ್ತಾ ಬಳೆಯುತ್ತಾ ರಾಜ್ಯ ಕಟ್ಟಿಕೊಳುತ್ತಾ ಹೋದರು. ಅದಕ್ಕೆ ಅಲ್ಲಿನ ಜನರಿಂದ ಬೆರೆತ ಪೀಳಿಗೆಯವರ ಚರ್ಮದ ಬಣ್ಣ, ಮುಖ ಲಕ್ಷಣ ಎಲ್ಲಾ ಮಾರ್ಪಾಡಾಗುತ್ತಾ ಹೋಯಿತು!

ಇದು ಆಂಥ್ರೋಪಾಲಜಿ, ಮಾನವ ಶಾಸ್ತ್ರದ ಪ್ರಕಾರ!

ಬರೇ ಮಂಗನಿಂದ ಮಾನವ ಅಲ್ಲ, ಆಗಲೇ ಡಿ ಎನ್ ಎ ಸಹಾ ಮಾರ್ಪಡಿಸ ಬಲ್ಲ ಈ ಮಂಗಳ ಗ್ರಹದವರು ನಮ್ಮನ್ನು ಹೊಸ ಶಕ್ತಿಯುತ ಪೀಳಿಗೆಯಾಗಿ ಆಧುನಿಕ ಮಾನವನಾಗಿ ಪರಿವರ್ತಿಸಿದರು,. ಎನ್ನುತ್ತಾರೆ ಈ ಕೆಲವು ಪಿತೂರಿ ಸಿದ್ಧಾಂತದವರು!!

ಅವರಾಗೇ ನಮ್ಮಲ್ಲಿ ಬೆರೆತರೋ, ಅಥವಾ ಆನಂತರ ಇನ್ನೆಲ್ಲೋ ಹೊರಟುಹೋದರೋ ಗೊತ್ತಾಗುತ್ತಿಲ್ಲ. ಆದರೆ ನಮ್ಮ ಜೀನ್ಸ್ ನಲ್ಲಿ ಡಿಎನ್ ಎ ನಲ್ಲಿ ಸಂಕರವಾದದ್ದು ಹೀಗೆ ಎನ್ನುತ್ತಾರೆ…

(ಅದಕ್ಕೇ ನಮಗೆ ಇಂದಿಗೂ ಆ ಬರಡು ಗ್ರಹ ಮಂಗಳನನ್ನು ಕಂಡರೆ ಏನೋ ಸಾಫ್ಟ್ ಕಾರ್ನರ್… ಅಮೆರಿಕಾ ಚೀನಾ, ಭಾರತ ಏಕೆ, ಅತಿ ಚಿಕ್ಕ ದೇಶ ಯು ಎ ಇ ಸಹಾ ಇಂದು ಮಂಗಳದ ನೆಲದ ಮೇಲೆ ವಾಕಿಂಗ್ ಮಾಡುತ್ತಿವೆ!)

ಅವರು ಮತ್ತೆ ಬರುತ್ತೇವೆ, ಪಿರಮಿಡ್ಡುಗಳಲ್ಲಿ ಮಮ್ಮಿಗಳಾಗಿ ಇಡಿ ನಾವು ಮತ್ತೆ ಬಂದಾಗ ಜೀವ ಕೊಡುತ್ತೇವೆ ಎಂದರಂತೆ.

ಅದೇ ಈ ಪಿರಮಿಡ್ಡುಗಳ ಮಮ್ಮಿ ಲೆಜೆಂಡು. ಅವರು ಮತ್ತೆ ಇಲ್ಲಿಗೆ ಬರಲಾಗಲೇ ಇಲ್ಲವೋ ಏನೋ ಅಥವಾ ಮುಂದೊಮ್ಮೆ ಬಂದಾರೋ? ಮಂಗಳ ಗ್ರಹ ವಾಸಿಗಳ ವಂಶಸ್ತರೇ ನಾವು?.. ಮಂಗಳನನ್ನು ಭೂಮಿಪುತ್ರ ಎನ್ನುತ್ತದೆ ನಮ್ಮ ಪುರಾಣ. ಹಾಗಲ್ಲವೆನೋ ? ಈ ಭೂಮಿಯೇ ಮಂಗಳ ಪುತ್ರನಾಗಿದ್ದಿರಬೇಕು.

(ಇದೆಲ್ಲಾ ನನ್ನ ಐಡಿಯಾ ಅಲ್ಲ, ಇದನ್ನು ಪ್ರೂವ್ ಮಾಡು ಎಂದರೆ ನಾನು ಒಪ್ಪಲೂ ಬೇಕಿಲ್ಲ. ಇದೆಲ್ಲಾ ಕಾನ್ಸ್ಪಿರೆಸಿ ಥಿಯರಿಯವರು ಮುಂದಿಟ್ಟ ಹಲವಾರು ವಾದ, ಪುಸ್ತಕಗಳು, ಸೆಮಿನಾರುಗಳ ಸಾರಾಂಶ ಅಷ್ಟೇ,.,’ಇದನ್ನು ನೀವು ನಂಬುವಿರೋ ಬಿಡುವಿರೋ ನನಗೆ ಗೊತ್ತಿಲ್ಲ. ಆದರೆ ಆ ವಿಷಯ ಹಾಗಿದೆ ಎಂದು ಕನ್ನಡದಲ್ಲಿ ಅನುವಾದ ಮಾಡಿದ್ದೇನೆ ಮಾತ್ರ.- ಲೇಖಕ)

ಈ ಸಿದ್ಧಾಂತ ಸ್ವಲ್ಪ ಸತ್ಯವೋ, ಅರ್ಧ ಸತ್ಯವೋ ಪೂರ್ಣ ಸತ್ಯವೋ ನಿಮ್ಮ ಅರಿವಿಗೆ ಬಿಟ್ಟಿದ್ದು ಸರಿ , ಮಂಗಳನಲ್ಲಿ ಅವರಿದ್ದರು, ಚೆನ್ನಾಗಿಯೇ ಇದ್ದರು ಆದರೆ, ಯುದ್ಧ ಏಕೆ ಮಾಡಿಕೊಂಡರು: ಅಲ್ಲಿ ಏನಾಯಿತಂತೆ?

ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ?
ಎಂಬ ಡಾ. ರಾಜಕುಮಾರರ ಮಾರ್ಮಿಕ ಚಿತ್ರಗೀತೆ ಇಲ್ಲಿ ಸೂಕ್ತವಾಗಿದೆ.

ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ

ಒಳ್ಳೇದೆಲ್ಲಬೇಕು ಎಂಬ ಛಲದಲ್ಲಿ

ಯಾರನ್ನೂ ಪ್ರೀತಿಸನು ಮನದಲ್ಲಿ

ಏನೊಂದೂ ಬಾಳಿಸನು ಜಗದಲ್ಲಿ…

ಮಾರ್ಸ್ ಎಂದರೆ ಗಾಡ್ ಆಫ್ ವಾರ್… ನೋಡಲು ಸಹಾ ರಕ್ತಗೆಂಪು ಗ್ರಹ.. ಯುದ್ಧ, ಸ್ಪೋಟ, ಸಾವು ನೋವು ಭಗ್ನವಾದ ಸುಟ್ಟುಹೋದ ಶಿಥಿಲ ಗ್ರಹವೇ ಆಗಿರಲಿಲ್ಲ… ಆಗ,!…  ಒಂದು ಕಾಲದಲ್ಲಿ- ಕೆಲವು ದಶಕೋಟಿ ವರ್ಷಗಳ ಹಿಂದೆ ಅಲ್ಲಿ ಭೂಮಿಗಿಂತಾ ಉತ್ತಮ ವಾತಾವರಣ ಇತ್ತೆಂದು ಭೂ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಉತ್ತಮ ಹವಾ, ಬೆಳಕು, ನದಿ, ಸಾಗರಗಳು, ಫಲವತ್ತಾದ ಭೂಮಿ ಅದರೊಂದಿಗೆ ಸಮೃದ್ಧ ಗ್ರಹವಾಗಿ ಮಂಗಳ ಕಂಗೊಳಿಸುತಿತ್ತು ಆ ಕಾಲದಲ್ಲಿ..ಮಂಗಳಕರವಾಗೇ ಇತ್ತು!

ಆಗ ಶುರುವಾಯಿತು ಅಲ್ಲಿನ ಸೈಡೋನಿಯಾ – ಯುಟೋಪಿಯಾ ಪ್ರದೇಶದ ಮಧ್ಯೆ ದುಷ್ಟ ಪೈಪೋಟಿ, ಅಹಂಕಾರ, ಧ್ವೇಷ! ನಮ್ಮ ಚರಿತ್ರೆಯಲ್ಲಿ ಇಲ್ಲವೆ, ರಾಜ ಮಹಾರಾಜರ ರಕ್ತ ಚರಿತೆ! ಒಬ್ಬರ ಮೇಲೊಬ್ಬರು ಹತ್ತಾರು ಸಲ ಯುದ್ಧ ಮಾಡಿ ಅವರದನ್ನು ವಶ ಪಡಿಸಿಕೊಳ್ಳುವ ಅಧಿಕಾರ ದಾಹ, ಕಬಳಿಸುವ ದುರಾಸೆ? ನೆಲ ಗೆದ್ದುಬಿಡಬೇಕು, ನಾನೇ ಎಲ್ಲದಕ್ಕೂ ರಾಜನಾಗಬೇಕು!.,.ಅದೇ ಆಯಿತಂತೆ ಮಂಗಳನಲ್ಲೂ! ದಶಕಗಳು ಶತಮಾನಗಳು ಕಳೆದರೂ ಇವರ ಹೋರಾಟ ಕೊನೆಯಾಗಲೇ ಇಲ್ಲ, ಯುದ್ಧಗಳು, ಭಯಂಕರ ಆಯುಧಗಳು ಅಸ್ತ್ರಗಳು ತಯಾರಿಸಿ ಪರಸ್ಪರ ದಾಳಿ ಮಾಡುತ್ತಲೇ ಹೋದರು.. ಈಗಿನ ಕಾಲದ ಇಲ್ಲಿನ ಯುದ್ಧ, ಉಗ್ರವಾದಿಗಳನ್ನು ನೋಡಿದ ನಮಗೆ ಇದು ಆಶ್ಚರ್ಯುವೇನೂ ಅಲ್ಲ!

ಕೊನೆಗೆ ಅಕ್ಕ ಪಕ್ಕದ ಇನ್ಯಾವುದೋ ಅನ್ಯಗ್ರಹ ವಾಸಿಗಳನ್ನು ಇವರಿಬ್ಬರಲ್ಲಿ ಯಾರೋ ಹೊಂದಾಣಿಕೆ ಮಾಡಿ ಕರೆದುಕೊಂಡು ಬಂದರೋ, ಅಥವಾ ಅವರೇ ಇವರ ಕಚ್ಚಾಟ ಕಂಡು ಅದರ ದುರ್ಲಾಭ ಪಡೆಯಲು ಅಲ್ಲೇ ವಸಾಹತು ಮಾಡಿಕೊಳ್ಳಲು ಇವರ ಮೇಲೆ ಮುಗಿಬಿದ್ದರೋ ಗೊತ್ತಿಲ್ಲ..

ಮೂರು ಕೋನದ ಹೊರಾಟ ಮಂಗಳನಲ್ಲಿ!

.. ಅವರ ಜಗವೇ ಒಂದು ರಣರಂಗ ಆಯಿತೇನೋ ಆ ನೋವಿನ ಕಥೆ ಪುರಾಣಗಳಲ್ಲಿ ಮಾತ್ರ ಸಿಗುತ್ತದೆ.. ಬಿಲಿಯನ್ ವರ್ಷದ ಹಿಂದಿನ ಘಟನೆಗಳು ಅದಕ್ಕೇ ನಾನು ಡಾ,ರಾಜ್ ರವರ ಹಾಡಿನ ಈ ಸಾಲು ನೆನೆಪಿಸಿಕೊಳ್ಳುವುದು:

ಪ್ರಾಣಿಗಳೇನು ಗಿಡಮರವೇನು

ಬಿಡಲಾರ ಬಿಡಲಾರ ಬಿಡಲಾರ

ಬಳಸುವನೆಲ್ಲ, ಉಳಿಸುವುದಿಲ್ಲ, ತನ್ನ ಹಿತಕ್ಕಾಗೇ ಹೋರಾಡುವ ಕೊನೆಗೊಂದು ಎಲ್ಲ ಯುದ್ಧಗಳನ್ನೂ ಕೊನೆಗಾಣಿಸುವ ಮಹಾಯುದ್ಧವೂ ಆಗಿಯೇ ಹೋಯಿತು ಬೃಹತ್ ಪರಮಾಣು ಬಾಂಬ್ಸ್ ತಂತಮ್ಮ ತಲೆಯ ಮೇಲೆ ಎಸೆದುಕೊಂಡೂ ಬಿಟ್ತರು.. ನಿರ್ನಾಮವಾದರು! ಎಲ್ಲ ಹತರಾಗಿ ಹೋದರು…

ಇದು ನಮ್ಮ ಇಸ್ರೋ -ಭಾರತದ ಚಿತ್ರ! ಹೊಗೆಯುಗುಳುತ್ತಿರುವ ಮಂಗಳ  ಅದರ ದುಷ್ಪರಿಣಾಮದ ಅರಿವಿತ್ತೋ ಇಲ್ಲವೋ ಅವರಿಗೆ!,. ಇಡೀ ವಾತವರಣವೇ ಬಗ್ಗಡವಾಗಿ ಹವಾ strip ಆಗಿ ಹೋಗಿ, ಆಕ್ಸಿಜೆನ್- (ಆಮ್ಲಜನಕ) ಕೆಟ್ಟು ವಿಷಾನಿಲ ತುಂಬಿಕೊಡಿತು

ಗ್ರಹಕ್ಕೆ ಗ್ರಹವೇ ಸ್ಮಶಾನವಾಯಿತು. ಬರಡು ಬೆಂಗಾಡಾಯಿತು

ಅದೇ ನಮಗೆ ಇಂದು ಕಾಣುವ ನಿರ್ಜನ ಕೆಂಪು ಗ್ರಹ! ಮಂಗಳ…

ಹಾಗಾದರೆ ಯಾರಾದರೂ ಉಳಿದುಕೊಂಡರೆ? ಎಲ್ಲಾ ಮೃತರಾದರೆ”?

ಯಾರೋ ಉಳಿದುಕೊಂಡವರು, ಬದುಕಿದ್ದವರು ಅಲ್ಲಿಂದ ಗಗನ ನೌಕೆಯಲ್ಲಿ ಹೊರಕ್ಕೆ, ಅಂತರಿಕ್ಷಕ್ಕೆ ಪಲಾಯನ ಮಾಡಿರಬಹುದು..

ಹೊಸ ಬಾಳು ಕಾಣುವ ಆಸೆಯಿಂದ!

ಅವರಿಗೆ ಹೊಸಬೆಳಕು ಮೂಡಿತೆ, ನಮ್ಮ ಭೂಮಿಯಲ್ಲಿ? ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ

ಸ್ವಾತಿ ಮೋಹನ್ ಇದೀಗ ಅಮೆರಿಕದ ಮತ್ತೊಂದು ಯಶಸ್ವಿ ಉಡಾವಣೆ ಮತ್ತು ಇಳುಗಡೆ ಮಾಡಿ ಮಂಗಳದಲ್ಲಿ ಪರ್ಸಿವೆರೆನ್ಸ್ ರೋವರ್ ಕಳಿಸಿದ ಭಾರತಮೂಲದ ಹೆಮ್ಮೆಯ ಮಹಿಳಾ ಅಮೆರಿಕನ್ ವಿಜ್ಞಾನಿ ಅಧಿಕೃತ ಪತ್ರಿಕೆಯಲ್ಲಿ ಹೇಳುತ್ತಾರೆ ಒಂದು ಕಡೆ:

ಮಂಗಳದ ಬಂಡೆಗಳ ಕೆಳಗೆ ನೀರಿತ್ತು. ಅಲ್ಲಿ ಜೀವದ ಕುರುಹು ಕಾಣಬಹುದು ಎಂದಿದ್ದೇವೆ.

ಹಿಂದೊಮ್ಮೆ ಆ ಗ್ರಹದಲ್ಲಿ ಯಾರಾದರೂ ಇದ್ದರೇನೋ, ಅವರ ಬಗ್ಗೆ ಖಚಿತವಾಗಿ ಈ ಬಾರಿ ಪತ್ತೆ ಮಾಡಲೆಂದೇ ಚಲದಿಂದ ಹೋಗಿದ್ದೇವೆ.

ಮಂಗಳದಲ್ಲಿ ಬಿಲಿಯನ್ ವರ್ಷಗಳ ಕೆಳಗೆ ಜೀವ ಬೆಳೆದಿತ್ತೆಂದರೆ, ಬೇರೆ ಕಡೆಯೂ ಈತರಹ ಜೀವಗಳು ಉದಯಿಸಿರಬಹುದಲ್ಲ?… ನಮ್ಮಲ್ಲಿ, ಭೂಮಿಯಲ್ಲೂ ಜೀವ ಹೇಗೆ ಹುಟ್ಟಿತು, ಮತ್ತೆ ಏನಾಗಿದೆ ಎಂಬ ಉತ್ತರ ಸಹಾ ಸಿಕ್ಕಬಹುದು.. ಇದಕ್ಕಿಂತಾ ದೊಡ್ಡ ಪ್ರಶ್ನೆಯನ್ನೂ ಉತ್ತರಿಸಬಹುದು:

ಈ ದೊಡ್ಡ ಬ್ರಹ್ಮಾಂಡ, ವಿಶ್ವದಲ್ಲಿ ಯಾರಾದರೂ ಇದ್ದಾರೆಯೆ? ಇದ್ದರೆ? ಅಥವಾ ನಾವು ಮಾತ್ರವೆ?

( ಮುಂದುವರೆಯುವುದು…)

 

 

Leave a Reply