ಸಿರಿ ಧಾನ್ಯದ ಚಿತ್ರಗಳು..!

ಸಿರಿ ಧಾನ್ಯದ ಚಿತ್ರಗಳು..!
ಸಾವಯವ ಕೃಷಿಯೆಂದರೆ ನಮ್ಮ ಪಾರಂಪರಿಕ ಕೃಷಿಯ ಎಲ್ಲಾ ಆಯಾಮಗಳನ್ನು ಗಟ್ಟಿ ಮಾಡುವ ಪ್ರಯತ್ನ. ಇನ್ನೊಂದು ಪ್ರಕೃಯಿಯೊಂದಿಗೆ ತಾದಾತ್ಮತೆ ಸಾಧಿಸಿ ನಡೆಸುವ ಕಸುಬೇ ಹೊರತು ಶುದ್ಧ ಯಾಂತ್ರಿಕ ಕಸುಬಂತೂ ಅಲ್ಲ. ಪ್ರಕೃತಿ ಹಾಗೂ ಮಾನವ ಸಂಬಂಧಗಳು ಮಧುರ ಸಂಬಂಧವಾಗಿ ಉಳಿಯುವಲ್ಲಿ ಸಾವಯವ ಕೃಷಿ ನೆರವಾಗುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಿಸಲು ಮತ್ತು ಸಾವಯವ ಕೃಷಿ ಉತ್ತೇಜಿಸಲು, ‘ಸಾವಯವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳ’ ಆಯೋಜಿಸಲಾಯಿತು. ಈ ಪ್ರದರ್ಶನದಲ್ಲಿ ಸಂಪೂರ್ಣವಾಗಿ ಸಿರಿಧಾನ್ಯಗಳನ್ನೇ ಬಳಸಿ ಸಿದ್ಧಪಡಿಸಿದ ಕೆಲವು ಚಿತ್ರಗಳು ವೀಕ್ಷಕರೆಲ್ಲರ ಮೆಚ್ಚುಗೆಗೆ ಪಾತ್ರವಾದವು.

ಹೊಸ್ಮನೆ ಮುತ್ತು

Leave a Reply