ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ

ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ

ವಿದ್ಯಾರ್ಥಿಗಳ ಪ್ಲೇಸ್‍ಮೆಂಟ್‍ನವರೆಗೆ ಆದಾಯ ತರುವ ಪ್ರವೇಶ ಫೀಯಿಂದ ಕೊಡುವ ವೇತನ ವೆಚ್ಚದವರೆಗೂ ಎಲ್ಲವೂ ಅದ್ವಾನವಾಗಿರುವಾಗ, ಈಗ ಒಮ್ಮಿಂದೊಮ್ಮೆಲೆ ಸುಧಾರಣೆಯ ಪರ್ವವಾಗಿ ಎಲ್ಲವೂ ಸಮರೋಪಾದಿಯಲ್ಲಿ ನಡೆಯುತ್ತಿರುವುದು ಚುನಾವಣೆ ಸಮೀಪಿಸುತ್ತಿತುವಾಗ ಅನ್ನುವದು ಕಾಕತಾಳೀಯವಾದರೂ ಸತ್ಯವೇ ಸರಿ.
ರಾಜ್ಯದಲ್ಲಿ ಹೊಸದಾಗಿ ವಿಶ್ವವಿದ್ಯಾಲಯಗಳ ಕಾನೂನು ಯಾವುದೇ ಜ್ಞಾನಪೂರಕ ಚರ್ಚೆಯಿಲ್ಲದೆ ಎರಡೂ ಜವಾಬ್ದಾರಿಯುತವಾದ ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿ ಹೊರನಡೆದಾಗ ಇಂತಹ ಕಾನೂನು ಬೇರೆ ರಾಜ್ಯದಲ್ಲಿ ಇರದೇ ಇರುವಾಗ ಮುಂಚಿತವಾದ ಯಾವುದೇ ಚರ್ಚೆಗಳಲ್ಲದೇ ಧ್ವನಿಮತದಿಂದ ಸ್ವೀಕೃತವಾಯಿತು. ಹಿಡಿದ ಹಠ ಸಾಧಿಸಿದೆ ಎಂದು ಕೆಲವರು ಈ ವಿಧೇಯಕ ನಮ್ಮ ಪಕ್ಷದ್ದು ಅಂತಾ ಫ್ರೀಡಂಪಾರ್ಕನಲ್ಲಿ ಕುಳಿತವರೆಲ್ಲರೂ ಒಕ್ಕೊರಲಿನಿಂದ ಕೂಗುವ ಹಾಗೆ ಧ್ವನಿಮತ ನೀಡಿದರು. ಯಾವ ಕುಲಪತಿಗಳು ಹುದ್ದೆಯ ಬಿಡೆಯಿಂದ, ಶಾಂತ ಮುದ್ರೆಯಿಂದ ಕೂತರು. ಆಹಾರ ಸಂಸ್ಕೃತಿಯ ಬಗ್ಗೆ ಬಡಬಡಿಸುವ ದಲಿತರು ಮುಖ್ಯಮಂತ್ರಿಗಳು ಆಗಲೇಬಾರದು ಎನ್ನುವರು ತಮಗೊಂದು ಯುಜಿಸಿ ವೇತನ ಶ್ರೇಣಿ ಸಿಕ್ಕರೆ ಸಾಕು ಅನ್ನುವ ಪ್ರಾಧ್ಯಾಪಕರು, ಯಾರು ಕುಲಪತಿ ಆದರೇನು, ಸರ್ಕಾರದ ಮಾನ್ಯತೆ ಪಡೆದ ಒಂದು ಪದವಿ ಸಾಕು ಅನ್ನುವ ಯುವಜನತೆ ಇಂತಹವರ ಮಧ್ಯೆ ಎಂತಹ ವಿಧೇಯಕಗಳು ಪಾಸಾಗುವ ಬೌದ್ಧಿಕ ಜಡತ್ವ ತುಂಬಿದ ಸನ್ನಿವೇಶ ಈಗ ನಮಗೆ ಹೊಸತಲ್ಲ. ಇಲ್ಲಿಯವರೆಗೆ ನಮ್ಮ ವಿಶ್ವವಿದ್ಯಾಲಯಗಳು ಹೇಗಿದ್ದವು ಈಗ ಕಳೆದ 10-15 ವರ್ಷಗಳಲ್ಲಿ ಕಾಂಚನಮೃಗದ ಬೆನ್ನು ಹತ್ತಿ ಕಾಡಿದಲ್ಲಿ ಅದೃಶ್ಶವಾದ ರಾಮನಂತೆ ಕುಲಪತಿಗಳು ಅಂತರ್ಧಾನವಾಗಿದ್ದರೆ ಕ್ವಾಲಿಟಿ ಅನ್ನುವ ಸೀತೆಯನ್ನು ರಾವಣನಂತವರು ರಾಜಕೀಯ ವ್ಯವಸ್ಥೆಯಲ್ಲಿ ಎತ್ತಿಕೊಂಡು ಹೋಗಿ ಅಶೋಕವನದಲ್ಲಿ ನನ್ನ ಮಾತು ಕೇಳು. ನನ್ನ ಮದುವೆಯಾಗು ಅಂತ ಹಠ ಹಿಡಿದ ಹಾಗೆ ಕ್ವಾರ್ಟರ್ಲಿಯ ಪ್ರಶ್ನೆ. ಯಾಕೆ ರಾವಣ ಸೀತೆಯನ್ನು ಎತ್ತಿಕೊಂಡು  ಹೋದ ಅನ್ನುವ ಪ್ರಶ್ನೆ ರಾಮಾಯಣದಲ್ಲಿ ಬಂದರೆ, ಸದ್ಯದ ಪ್ರಶ್ನೆ ಈಗ ಈ ವಿಧೇಯಕ/ಕಾನೂನು ಅವಶ್ಯಕತೆ ಯಾಕೆ ಬಂತು ಅಂತ.
ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟ ಕಡಿಮೆಯಾಗಿದೆ, ಕುಲಪತಿಗಳಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಆಂತರಿಕ ಸೌಲಭ್ಯಗಳವರೆಗೆ ವಿದ್ಯಾರ್ಥಿಗಳ ಪ್ರವೇಶದಿಂದ ಹಿಡಿದು ಸಿಬ್ಬಂದಿ ನೇಮಕಾತಿವರೆಗೆ ಜಾಗತಿಕ ರ್ಯಾಂಕಿಂಗ್‍ನಿಂದ ಹಿಡಿದು ವಿದ್ಯಾರ್ಥಿಗಳ ಪ್ಲೇಸ್‍ಮೇಂಟ್ ನವರೆಗೆ ಆದಾಯ ತರುವ ಪ್ರವೇಶ ಫೀಯಿಂದ ಕೊಡುವ ವೇತನ ವೆಚ್ಚದವರೆಗೂ ಎಲ್ಲವೂ ಅದ್ವಾನವಾಗಿರುವಾಗಿ ಎಲ್ಲವೂ ಸಮರೋಪಾದಿಯಲ್ಲಿ ನಡೆಯುತ್ತಿರುವುದು ಚುನಾವಣೆ ಸಮೀಪಿಸುತ್ತಿರುವಾಗ ಅನ್ನುವದು ಕಾಕತಾಳೀಯವಾದರೂ ಸತ್ಯವೇ ಸರಿ.
‘ಸ್ವಾಯತ್ತತೆ’ ಅನ್ನುವದು ಮರೀಚಿಕೆಯ ಹಾಗಿದೆ. ಅಟೋನಮಿ ಅಂದರೇನು? ಒಂದು ರೀತಿಯ ಡ್ರೈವಿಂಗ್ ಲೈಸೆನ್ಸ್. ಒಂದು ರೀತಿ ಮದುವೆಯಾಗಿ ಸ್ವತಂತ್ರವಿರುವ ಸಂದರ್ಭದಲ್ಲಿ ಅತ್ತೆ. ಮಾವ, ಅವ್ವ, ಅಪ್ಪ ಎಲ್ಲರೂ ಮಕ್ಕಳ ವೈವಾಹಿಕ ಜೀವನದಲ್ಲಿ ಮೂಗು ಹಾಕುವುದು ಎಷ್ಟರಮಟ್ಟಿಗೆ ಸ್ವಾತಂತ್ರ್ಯವನ್ನು ಕಸಿದುಕೊಂಡಹಾಗೆ ಸ್ವಾಯತ್ತತೆ ಕಸಿದುಕೊಳ್ಳುವುದು. ಸ್ವತಂತ್ರವಾದ ಸಂಸ್ಥಾನಗಳಲ್ಲಿ ಅದನ್ನು ಮಾಡಬಾರದು, ಇದನ್ನು ಮಾಡಬಾರದು ಅಂತ ಬ್ರಿಟಿಷ್ ಸರ್ಕಾರ ಹೇರಿದ ಹಾಗೆ.
ನಮ್ಮ ದೇಶದಲ್ಲಿ ಅಟಾನಮಿ ಅಂದರೆ ಸ್ವಾಯತ್ತತೆಗೆ ಅರ್ಥವಿಲ್ಲದ ಹಾಗೆಯೇ ಐಐಟಿ, ಎನ್‍ಐಟಿ, ಇಸ್ರೋಗಳಲ್ಲಿ ಹೇಗೆ ಅಟಾನಮಿ ಕೂಡಾ ವಿಶ್ವವಿದ್ಯಾಲಯಗಳಿಗೆ ಅನ್ವಯಿಸಬೇಕು. ಇಂದು ಐಐಎಸ್‍ಸಿ ವಿಶ್ವಮಟ್ಟಕ್ಕೆ ಬಂದಾಗ ಅಲ್ಲಿ ಯಾವ ಮುಖ್ಯಮಂತ್ರಿ, ಶಾಸಕ, ಸಂಸದ ಪ್ರವೇಶ, ಆಡಳಿತ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ನಿರೀಕ್ಷಿತ ಮಟ್ಟ ಬರದಿದ್ದರೆ ಅದರದೂ ಆದ ಮಾರ್ಗಸೂಚಿ ಸಂವಿಧಾನ ಪ್ರಕಾರ ಮಾಡಬಹುದಾಗಿದೆ.
ಅಧಿಕಾರಸ್ಥರು ಯಾವಾಗಲೂ ಅಧಿಕಾರ ಬಿಟ್ಟು ಕೊಡುವುದಿಲ್ಲ. ಕೆಳಗಿನವರನ್ನು ಅಧಿಕಾರ ಹಸ್ತಾಂತರಕ್ಕೂ ತಯಾರು ಮಡುವುದಿಲ್ಲ. ಅವರ ಪ್ರಕಾರ ಒಳ್ಳೆಯವರು ಸಿಗುವುದೇ ಇಲ್ಲ. ಟ್ರಯಲ್ ಅಂಡ್ ಎರರ್ ಮಾಡಲು ಸಿದ್ಧರಿರುವುದಿಲ್ಲ. ಇದು ಸಂಸ್ಥಾ ಕಚೇರಿ, ಮನೆ ಯಾವುದಕ್ಕೂ ಅನ್ವಯಿಸುತ್ತದೆ. ಅದರಲ್ಲೂ ಪರೋಕ್ಷ ಅಥವಾ ಅಪರೋಕ್ಷವಾಗಿ ಧನಲಾಭವಿದ್ದರಂತೂ ಮುಗಿದುಹೋಯಿತು. ಇನ್ನೂ ಕೆಲವರಿಗೆ ಎಲ್ಲವೂ ಸಾಯುವತನಕ ತಮ್ಮ ಕೈಯಲ್ಲಿರಬೇಕು. ಅವರಿಗೆ ವಾನಪ್ರಸ್ಥಾಶ್ರಮವಿರುವುದೇ ಇಲ್ಲ.
ಇನ್ನು ಕೇಂದ್ರ ಸರ್ಕಾರದಲ್ಲಿ ಉನ್ನತ ಶಿಕ್ಷಣದ ಬಗ್ಗೆನೇ ಹಲವು ಗೊಂದಲಗಳು ಇವೆ, ಯುಜಿಸಿ, ಎಐಸಿಟಿಇ ಹೀಗೆ ಹಳೆಯ ಕಾಲದ ಚೌಕಟ್ಟಿನಲ್ಲಿ ಬೇರೂರಿದ ಹಲವು ಸಂಸ್ಥೆಗನ್ನು ಏನು ಮಾಡುವುದು ಜಾಗತಿಕ ಸವಾಲಿನ ದಾರಿಯಲ್ಲಿ ದಿಟ್ಟ ನೇರವಾದ ವ್ಯವಸ್ಥೆಯನ್ನು ಹೇಗೆ ರೂಪಿಸುವುದು ಅನ್ನುವ ಗೊಂದಲದ ಪರಿಸ್ಥಿತಿಯಲ್ಲಿ ದೇಶದ ಒಂದು ಭಾಗವಾದ ರಾಜ್ಯಕ್ಕೆ ಎಲ್ಲ ಸುಧಾರಣೆ ತನಗೆ ಬಂದಂತೆ ಮಾಡುವ ತರಾತುರಿ ಯಾಕೆ ಅನ್ನುವ ಪ್ರಶ್ನೆ ರಾಜ್ಯದಲ್ಲಿ ಬರುತ್ತಿರುವ ಚುನಾವಣೆಗಳು ಹಾಗೂ 1 ಕೋಟಿಗೂ ಮೀರಿ ವೆಚ್ಚದ ಕಟ್ಟಡಗಳು ಎಲ್ಲವೂ ತಮ್ಮ ಸುಪರ್ದಿಗೆ ಬಂದಾಗ ಕೆಲವಾದರೂ ವ್ಯಕ್ತಿಗಳಿಗೆ ಪಕ್ಷಕ್ಕೆ, ಮತ ಕ್ರೊಡೀಕರಣಕ್ಕೂ ಅನುಕೂಲವಾಗುವುದು ಬೇಡವಾದ ಸತ್ಯ. ಇಲ್ಲಿ ಯಾಕೆ ಮಾತು ಬರುತ್ತದೆ ಅಂದರೆ, ಎಷ್ಟೋ ಸರ್ಕಾರಿ ಕಾಲೇಜುಗಳಿಗೆ ಕಟ್ಟಡಗಳು ಬೇಗ ತಯಾರಾಗುತ್ತದೆ. ಆದರೆ ಮುಖ್ಯವಾಗಿ ಬೇಕಾಗುವ ಪ್ರಾಧ್ಯಾಪಕರು, ಉಪಕರಣಗಳು, ಆಂತರಿಕ ಸೌಲಭ್ಯಗಳೇ ಇರುವುದಿಲ್ಲ. ಫೀ ಕಡಿಮೆ ಆದರೆ ಟೂಷನ್ ಖರ್ಚು ಹೆಚ್ಚು ಅನ್ನುವ ಹಾಗೆ ಒಂದು ಚುನಾವಣೆ ಅವಧಿಯಲ್ಲಿ ಕಟ್ಟಡ ರೆಡಿಯಾಗಿಬಿಡುತ್ತದೆ. ನಾಲ್ಕು ಚುನಾವಣೆಯಾದರೂ ಪೂರ್ತಿ ಪ್ರಾಧ್ಯಾಪಕರು, ಆಂತರಿಕ ಸೌಲಭ್ಯ ಬರುವುದೇ ಇಲ್ಲ. ಇದು ಎಲ್ಲರಿಗೂ ಗೊತ್ತಿದ್ದ ಸಂಗತಿ, ಏನೂ ಇಲ್ಲದೇ ಬ್ಯಾಚ್ ಮೇಲೆ ಬ್ಯಾಚ್ ಪಾಸಾಗೆ ಹೋಗುತ್ತದೆ. ಬರೆ ವಿಧಾನಸಭೆಯಲ್ಲಿ ಪಾಸಾದರೆ ವಿಧೇಯಕ ಸ್ವೀಕೃತವಾಗುವುದಿಲ್ಲ. ಎರಡೂ ಸಭೆ ಪಾಸು ಮಾಡಿದರೂ ರಾಜ್ಯಪಾಲರು ಸಹಿ ಮಾಡದೇ ಮತ್ತೆ ಚರ್ಚೆ ಮಾಡಿ ಅಂತ ಕಳುಹಿಸಬಹುದು, ಅಷ್ಟರಲ್ಲಿ ಕೇಂದ್ರ ಸರ್ಕಾರ ಹೊಸದಾದ ಕಾನೂನು, ಉನ್ನತ ಶಿಕ್ಷಣ ಪಾಲಿಸಿ ನೀಡಬಹುದು.
ನಮ್ಮ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಮಟ್ಟ ಪಾಲು ಅಲ್ಲಿರುವ ತಜ್ಞ ಪ್ರಾಧ್ಯಾಪಕರ ಮೇಲೆ ನಿಂತಿರುತ್ತದೆ. ಅವರ ಗುಣಮಟ್ಟವೇ ಸಂಶೋಧನೆಯ ಗುಣಮಟ್ಟವನ್ನು ಹೇಳುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟಕ್ಕೆ ಯಾಕೆ ಬರಲಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ವಿಶ್ವವಿದ್ಯಾಲಯಗಳು ಕನಸಿನಲ್ಲೂ ಜಾಗತಿಕ ಮಟ್ಟಕ್ಕೆ ಬರಲು ಸಾಧ್ಯವಿಲ್ಲ. ಕುಲಪತಿಗಳಿಗೆ ಅರ್ಹತೆಗಳು ಇರಬೇಕೆಂದರೆ ಕನಿಷ್ಠವಾಗಿಯೂ ಸರಕಾರದ ಮುಖ್ಯಮಂತ್ರಿಗಳು. ಶಿಕ್ಷಣ ಮಂತ್ರಿಗಳು ಅಂತಹವೇ ಅರ್ಹತೆಗಳು ಇರಲೇಬೇಕದದ್ದು ಅನಿವಾರ್ಯವಲ್ಲವೇ? ಲಾರ್ಡ್ ಮೆಕಾಲೆಯವರು 1835ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಈಸ್ಟ್ ಇಂಡಿಯಾ ಕಂಪನಿಗೆ ಬೇಕಾಗುವ ಕಾರಕಾನ ಶಾಹಿಯನ್ನು ತಯಾರು ಮಾಡುವುದಕ್ಕಾಗಿ ಹಾಕಿಕೊಂಡ ಪದ್ಧತಿಯ ಉತ್ಪನ್ನಗಳಾದ ತಾವು ಸ್ವತಃ ಬುದ್ಧಿಯಿಂದ ನಮ್ಮ ವ್ಯವಸ್ಥೆ ನಮಗಾಗಿ ಮುಕ್ತವಾಗಿ ಹೇಗಿರಬೇಕೆಂದು ವಿಚಾರ ಮಾಡಲು, ಅಭಿವ್ಯಕ್ತಿಗೊಳಿಸಲು ಸಹಾಯಕಾರಿ ಆಗಿರುತ್ತಿತ್ತೋ ಏನೋ? ಅದೆಲ್ಲ ಇರದ ಕಾರಣವೆನೆಂದರೆ, ವಸಾಹತುಶಾಹಿ ನಮ್ಮನ್ನು ಬಿಟ್ಟರೂ ನಾವು ವಸಾಹತುಶಾಹಿಯನ್ನು ಬಿಟ್ಟಿಲ್ಲ. ಅದೇ ಪರಂಪರೆ ನಾವು ಹೇಳಿದ ಹಾಗೆ ಕೇಳಬೇಕು. ಸಂಸ್ಥಾನಿಕರೆಲ್ಲ ಬ್ರಿಟಿಷ್ ವೈಸರಾಯಗೆ ಕಾಣಿಕೆ ಸಲ್ಲಿಸಬೇಕು. ಏನು ಸ್ವಾತಂತ್ರ ಕ್ರಾಂತಿ ಆದರೇನಾಯಿತು? ಕೂಡುವುದು ಕೂಡಲೇಬೇಕು. ಕಟ್ಟುವುದು ಕಟ್ಟಲೇಬೇಕು. ವಿಚಾರಕ್ಕೊಂದು ಬಂಧನ, ಕ್ರಿಯೆಗೂ ಬಂಧನ ಚಂದ್ರಶೇಖರ ಕಂಬಾರರ ನಾಟಕ ‘ಜೈಸಿದ ನಾಯಕ’ದ ನಾಯಕ ಯಾರು ಕ್ರಾಂತಿಮಾಡಿ ಸುಧಾರಣೆ ಮಾಡಿ ಮತ್ತೆ ಶೋಷಣೆಗೆ ಸಿದ್ಧವಾದ ಸಿದ್ಧನಾಯಕ ಮತ್ತೆ ಮತ್ತೆ ನೆನಪಾಗುತ್ತದೆ.

ಕೃಪೆ : ಸಂಯುಕ್ತ ಕರ್ನಾಟಕ

Leave a Reply