ಸೋರೆಕಾಯಿಯ ಕಲಾಕೃತಿ

ಸೋರೆಕಾಯಿಯ ಕಲಾಕೃತಿ
ಕಲಾವಿದನ ಕೈಗೆ ಸಿಗುವ ಯಾವುದೇ ವಸ್ತುವಿನಲ್ಲೂ ಅದ್ಬುತ ಎನಿಸುವ ಒಂದು ಕಲೆ ಅರಳುತ್ತದೆ. ಇದು ಆತನ ಸೃಜನಾತ್ಮಕತೆಗೆ ಸಾಕ್ಷಿ. ಸೋರೆಕಾಯಿ ನಮಗೆ ಕೇವಲ ತರಕಾರಿಯಾಗಿ ಅಷ್ಟೇ ಗೊತ್ತು. ಆದರೆ ಈ ತಿನ್ನಬಹುದಾದ ಸೋರೆಕಾಯಿಯೊಂದು ಕಲಾವಿದನ ಕೈಗೆ ಸಿಕ್ಕಾಗ ಅದೊಂದು ಅಮೋಘವಾದ ಕಲಾಕೃತಿಯಾಗಿ ಪರಿವರ್ತನೆ ಹೊಂದುವ ಚಮತ್ಕಾರ ಮಾತ್ರ ಅಚ್ಚರಿಯೇ ಸರಿ. ಸೋರೆಕಾಯಿ ಸಂಗೀತ ವಾದ್ಯಗಳ ತಯಾರಿಕೆಯಲ್ಲಿ ಬಳಕೆಯಾಗುವುದನ್ನು ಕಂಡಿದ್ದೇವೆ. ಆದರೆ ಸೋರೆಕಾಯಿಯಿಂದ ಇನ್ನಿತರ ಉಪಯುಕ್ತ ವಸ್ತುಗಳನ್ನೂ ಕೂಡಾ ತಯಾರಿಸಬಹುದೆಂಬುದನ್ನು ಕೆಲ ಕಲಾಕೃತಿಗಳನ್ನು ಗಮನಿಸಿದಾಗ ನಮಗೆ ವೇದ್ಯವಾಗುತ್ತದೆ. ಪೆನ್ ಸ್ಟ್ಯಾಂಡ್, ಡೋರ್ ಹ್ಯಾಂಗಿಂಗ್, ಹೂದಾನಿ, ಡಿಸೈನರ್ ಬಟ್ಟಲುಗಳು ಮತ್ತು ಲ್ಯಾಂಪ್ ಶೇಡ್ ಗಳಂತಹ ವಸ್ತುಗಳು ಈ ತರಕಾರಿಯಿಂದ ರೂಪಗೊಂಡಿವೆ. ಇದರ ಪ್ರತಿಯೋಂದು ವಸ್ತುವು ಅನನ್ಯ ಮತ್ತು ಆಕರ್ಷಣೀಯ. ಈ ಉತ್ಪನ್ನಗಳು ಪರಿಸರ ಸ್ನೇಹಿಯಾಗಿದ್ದು: ಸಾಮಾನ್ಯರಿಗೂ ಕೈಗೆಟುಕುವಂತಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಈ ಅಲಂಕಾರಗಳು ಭಾರತವಲ್ಲದೆ, ವಿದೇಶದಲ್ಲಿಯೂ ಸಹ ಜನಪ್ರಿಯವಾಗಿದೆ. ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬಗಳಿಗಾಗಿ ಸೋರೆಕಾಯಿಯ ದೀಪಗಳಲ್ಲದೆ, ಹಲವು ಬಗೆಯ ಅಲಂಕಾರಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಅಡುಗೆಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳ ಬದಲಿಗೆ ಈ ವಸ್ತುಗಳ ಉತ್ಪತ್ತಿಗಳನ್ನು ಆಯ್ದುಕೊಳ್ಳಬಹುದು, ಸೋರೆಕಾಯಿಯ ಅಲಂಕಾರಿಕ ವಸ್ತುಗಳನ್ನು ಸಭೆ, ಸಮಾರಂಭಗಳಲ್ಲಿ ಬಳಸುವುದರ ಮೂಲಕ, ಉಡುಗೊರೆಗಳನ್ನು ಕೊಡುವ ಮೂಲಕ ಈ ಕಲೆಯನ್ನು ಪ್ರೋತ್ಸಾಹಿಸುವುದಲ್ಲದೇ, ಇದನ್ನು ಒಂದು ಉದ್ಯಮವಾಗಿಯೂ ಬೆಳೆಸಬಹುದು. ಪ್ಲಾಸ್ಟಿಕ್ ವಸ್ತುಗಳಿಗೆ ಹೆಚ್ಚು ಉತ್ಪೇಜನ ನೀಡುತ್ತಿರುವ ಪರಿಣಾಮ ಈ ಕಲೆ ಹೆಚ್ಚು ಜನಪ್ರಿಯವಾಗುತ್ತಿಲ್ಲ.
ಹೊಸ್ಮನೆ ಮುತ್ತು

Leave a Reply