ಸದಾ ನಗಿಸುವ ಘಟನೆ:

ಸದಾ ನಗಿಸುವ ಘಟನೆ:
ಒಮ್ಮೆ ತಿಮ್ಮ ತನ್ನ ಅಮ್ಮ ತಿಮ್ಮಕ್ಕನ ಕಣ್ಣಿನ ಆಪರೇಷನ್ಗೆ ಅಂತ ದವಾಖಾನಿಗ ಕರಕೊಂಡು ಬಂದಿದ್ದ. ಮುಂಜಾನೆ ನಸಿಕ್ನಾಗ ಆಪರೇಶನ್ ಮಾಡೋದು ಅಂತ ಡಾಕ್ಟರ ಹೇಳಿದ್ರು. ಸರಿ ತಿಮ್ಮಕ್ಕ ಬೆಡ್ ಮ್ಯಾಲ ಹಂಗ ಅಡ್ಡಾದ್ಲು. ಸಂಜೆಯಿಂದ ರಾತ್ರಿ ತನ ಒಂದೇ ಸಮ ಮಲಗಿ ಮಲಗಿ ಬ್ಯಾಸರ ಆಗಿ, ಹಾಂಗ ಎದ್ದು ಅಡ್ಡಡ್ಲಿಕ್ಕ ತಿಮ್ಮಕ್ಕ ಸೆರಗು ಸರಿ ಮಾಡ್ಕೋತಾ ಹೊರಗ ಹೋದ್ಲು. ಇಕ್ಕಾಡೆ ತಿಮ್ಮ ಸಂಜೆಯಿಂದ ಕುಂತು ಕುಂತು ಬ್ಯಾಸರ ಆಗಿ ಸ್ವಲ್ಪ ಅಡ್ಡರ ಆಗೋಣ ಅಂತ ತಿಮ್ಮಕ್ಕನ ಬೆಡ್ ಮ್ಯಾಲ ಮಲಕ್ಕೊಂಡ. ಹಾಂಗ್ ನಿದ್ದಿ ಹತ್ತಿ ಬಿಡ್ತು. ಅಷ್ಟ್ರಾಗ ನರ್ಸ್ ಬಂದು ತಿಮ್ಮ ಯಾರು ಅಂದ್ಲು, ತಿಮ್ಮ ನಿದ್ದಿ ಒಳಗ ನಾನ ಅಂದ.
ಸರಿ ನರ್ಸ್ ಶರ್ಟ ಮ್ಯಾಲ ಸರಿಶ್ರಿ ಅಂದು ಇಂಜೆಕ್ಷನ್ ಕೊಟ್ಳು . ತಿಮ್ಮ ಎದ್ದವನ ನನಗ ಯಾಕ್ರೀ ಅಂದ. ಕಣ್ಣ ಆಪರೇಷನ್ ನಿಮಗ ಹೌದಿಲ್ಲೋ ಅಂದ್ಲು. ತಿಮ್ಮ ಹೌಹಾರಿ ಅಲ್ರೀ ನಮ್ಮ ಅವ್ವ ತಿಮ್ಮಕ್ಕಂದು ಅಂದು ಗಾಬರಿ ಆಗಿ ನೋಡ್ಲಿಕ್ಕೆ ಶುರು ಮಾಡ್ದ. ನರ್ಸ್ ಒಮ್ಮೆ ಹೆದರಿ ಡಾಕ್ಟರ್ ಕಡಿ ಹೋದ್ಲು. ಸರಿ ಮತ್ತ ಡಾಕ್ಟರ್ ಬಂದು, ಏನ್ರೀ ನಿಮ್ಮ ಪೇಪರ್ನಾಗ ಸಹಿ ಬರೋಬರಿ ಮಾಡೆ ಇಲ್ಲ ತಿಮ್ಮಕ್ಕ ಅನ್ನೋದು ಅರ್ಧ ಆಗಿ ತಿಮ್ಮ ಅಂತ ಆಗ್ಯದ. ಅದು ಹೋಗ್ಲಿ ನೀವು ಯಾಕ ಪೆಶಂಟ್ ಮಲಗೋ ಜಗದಾಗ ಮಲಗಿರಿ ಅಂತ ಹಿಗ್ಗಾ ಮುಗ್ಗಾ ಬೈದ. ಇರ್ಲಿ ನಾವು ಕೊಟ್ಟ ಇಂಜೆಕ್ಷನ್ ನಿಮಗ ಏನೂ ಆಗಂಗಿಲ್ಲ. ಆದ್ರ ಬ್ಯಾರೆ ಏನರ ಆಗಿದ್ರ ಭಾಳ ಅನರ್ತ ಆಗ್ತಿತ್ತು ಅಂದ. ತಿಮ್ಮ ಸಾವರಿಸಿಕೊಂಡು ಎದ್ದು ಕುಂತ ಅದಕ್ಕ ಯಾವತ್ತೂ ರೋಗಿಯ ಹಾಸಿಗಿ ಮ್ಯಾಲ ಮಲಗ ಬಾರದು. ತಿಳೀತಾ.
ಇದು ಖರೆ ನಡೆದದ್ದು. ಮ್ಯಾಲ ನಾವು ನಕ್ಕ ನಕ್ಕ ಇಟ್ಟಿವಿ.

Leave a Reply