ಸುನಾಮಿ

ಸುನಾಮಿ

ಹೊಸವರುಷನು
ಹರುಷದಿ ಎದುರುಗೊಳ್ಳುವಾಗ
ಸಿಡಿದೆದ್ದ ಭೂತಾಯಿ
ಕಡಲಾಳದಿ ಸಿಡಿಸಿಹ ಜ್ವಾಲಾಮುಖಿ
ಎದೆಯೆತ್ತರಕೂ ಮೀರಿ
ಪುಟಿದಿಹ ಅಲೆಗಳು
ಮೈಮರೆತ ಜನಗಳ
ಕನಸ ಕಂಬಳಿಯನು ಸರಿಸಿ
ವಾಸ್ತವಕ್ಕಿಳಿಸಿತಲ್ಲಾ
ಬೆಚ್ಚಗಿನ ತಾಯ ತೆಕ್ಕೆಯಲಿ
ಪವಡಿಸಿಹ ಕಂದಮ್ಮಗಳಿಗೆ
ಅಲೆಯ ಹಾಸುಗೆ ಹೊದಿಸಿತಲ್ಲಾ
ಅರಳುವ ಕಂಗಳಿಂದ
ಕಾಮನಬಿಲ್ಲನು ವೀಕ್ಷಿಸುವ
ಮಕ್ಕಳ ತಾಯ್ತಂದೆಯನು
ಮರೆಯಾಗಿಸಿ ಬೆಳಗುವ ಬಾಳಿಗೆ
ಅಂಧಕಾರವ ಮೂಡಿಸಿ
ಕಾರ್ಮೋಡವ ಮುಸುಗಿಸಿ
ಬಾಳ ಬರಿದಾಗಿಸಿತಲ್ಲಾ
ಸ್ತಬ್ಧ ವಾತಾವರಣದಿ ತಾನು
ಒಳಗೊಳಗೇ ಕುದಿದು
ತನ್ನ ಆರ್ಭಟವ ಮೆರೆದು
ಮುನುಕುಲಕೆ ಜಲಪ್ರಳಯದ
ಭೀತಿ ಮೂಡಿಸಿ ಮರೆಯಾದ
ಸುನಾಮಿ ಭೂತ
ಮಾನವನ ಅಸ್ತಿತ್ವಕ್ಕೆ ಪ್ರಶ್ನೆ ಹಾಕಿ
ಬ್ರಹ್ಮಾಂಡದಲಿ ಕ್ರೌರ್ಯವ ಮೆರೆಸೆ
ಮಾನವನಿಗೆ ಯಾರೂ ಶಾಶ್ವತರಲ್ಲ
ರಾಜ ಕೂಡ ರಂಕನಾಗುವ ಪರಿ
ರುಜುಪಡಿಸಿದ ಕರಾಳ ದಿನ
ಇತಿಹಾಸ ಪುಟದಿ ಕಪ್ಪಿಟ್ಟ ದುರ್ದಿನ.

Leave a Reply