ತೆನೆ ತೋರಣ

ತೆನೆ ತೋರಣ
ಮನೆಯ ಮುಂಬಾಗಿಲಿಗೆ ತೋರಣ ಕಟ್ಟುವುದು ಶುಭಕಾರಕವೆಂಬುದು ನಂಬಿಕೆ. ಸಾಂಪ್ರದಾಯಿಕ ಅಥವಾ ಪ್ರಾಚೀನ ವಿಶೇಷತೆಯಿರುವ ವಸ್ತುಗಳಿದ್ದರೆ ಅಲಂಕಾರಕ್ಕೊಂದು ವಿಶೇಷ ಮೆರುಗು ಬರುತ್ತದೆ. ತೋರಣಗಳಲ್ಲೇ ವಿಶಿಷ್ಟವಾದುದು ಭತ್ತದ ತೆನೆಗಳಿಂದ ತಯಾರಾದ ತೋರಣ. ಒಣಗಿದ ಭತ್ತದ ತೆನೆಗಳನ್ನು ಸಂಗ್ರಹಿಸಿ, ಅವನ್ನು ಕಲಾತ್ಮಕವಾಗಿ ಹೆಣೆದು ತೋರಣ ನಿರ್ಮಿಸಲಾಗುತ್ತದೆ. ಇದು ಮನೆಗೆ ಹೊಸತನ ನೀಡುವುದರ ಜೊತೆಗೆ, ಬಾಗಿಲ ಚೌಕಟ್ಟು ಇನ್ನಷ್ಟು ವಿಶೇಷತೆಯಿಂದ ಕೂಡಿ, ನೋಟಕ್ಕೆ ಸುಂದರವಾಗಿಯೂ ಆಕರ್ಷಕವಾಗಿಯೂ ಕಾಣುತ್ತದೆ. ಇತ್ತೀಚಿಗೆ ಭತ್ತದ ದೇಸಿ ತಳಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿವಿಧ ತಳಿಗಳ ಭತ್ತದ ತೆನೆಗಳನ್ನೇ ಹೆಣೆದು ತೋರಣಗಳ ರೂಪ ಕೊಟ್ಟು ಅಲಂಕಾರಿಕವಾಗಿ ಬಳಕೆ ಮಾಡುತ್ತಿದ್ದಾರೆ. ಮನೆಯ ಮುಂಬಾಗಿಲಿಗೆ ಇಂತಹ ತೋರಣ ಕಟ್ಟುವುದರಿಂದ ಗುಬ್ಬಚ್ಚಿಯಂಥ ಪಕ್ಷಿಗಳಿಗೆ ಆಹಾರವಾಗಿ ಉಪಯೋಗವಾಗುವುದಲ್ಲದೇ, ಮನೆಯ ಕೈತೋಟಕ್ಕೆ ಹಕ್ಕಿ-ಪಕ್ಷಿಗಳನ್ನು ಆಕರ್ಷಿಸಲು ಕೂಡಾ ನೆರೆವಾಗುತ್ತದೆ.

ಹೊಸ್ಮನೆ ಮುತ್ತು

Leave a Reply