ಪದ್ಮಗಂಧಾ (೨೦೧೬)

ನಾಟಕದ ಬಗ್ಗೆ

ಪದ್ಮಗಂಧಾ ನಾಟಕದ ಕಥಾವಸ್ತು ಮಹಾಭಾರತವನ್ನು ಆಧರಿಸಿದ್ದು. ಇದರಲ್ಲಿ ವ್ಯಕ್ತವಾಗುವ ತ್ಯಾಗ, ಪ್ರೀತಿ, ವಾತ್ಸಲ್ಯಭಾವ ಇಂದಿನ ಸಮಾಜಕ್ಕೆ ತೀರ ಸನಿಹವಾಗುತ್ತದೆ. ಶ್ರೀಮಂತಿಕೆ ಇರುವಲ್ಲಿ ಪ್ರೀತಿಯ ಕೊರತೆ ಒಂದುಕಡೆ ಆದರೆ ನಿಸರ್ಗದತ್ತ ಸಹಜ ಪ್ರೀತಿ ಇರುವಡೆ ಮಾನವ ನಿರ್ಮಿತಿಯ ಸಂಪತ್ತಿನ ಆಕರ್ಷಣೆ ಇನ್ನೊಂದೆಡೆ. ಇಂತಹ ಮಾನವನ ಸ್ವಾಭಾವಿಕ ಸೆಳೆತಗಳು ಹಸ್ತಿನಾಪುರ ಹಾಗೂ ದಾಸಪುರದಲ್ಲಿ ಕಂಡುಬರುತ್ತದೆ. ಕೊನೆಯಲ್ಲಿ ಈ ಬಯಕೆಗಳು ದೇವವ್ರತನ ತ್ಯಾಗದ ಫಲವಾಗಿ ಈಡೇರುವಂತಾಗುತ್ತದೆ.
ಉಪರಿಚರನ ಧಾತುವಿನಿಂದ ಮತ್ಸ್ಯದಲ್ಲಿ ಹುಟ್ಟಿದ ಮಗು ದಾಶರಾಜನಿಗೆ ಸಿಕ್ಕು ಮತ್ಸ್ಯಗಂಧಿಯಾಗಿ ಬೆಳೆಯುತ್ತಾಳೆ. ಅವಳ ಮೈಯ್ಯ ದುರ್ಗಂಧದ ಕಾರಣ ಜನರಿಂದ ತಿರಸ್ಕಾರಕ್ಕೊಳಗಾಗುವ ಮತ್ಸ್ಯಗಂಧೆ ಪರಾಶರನ ಅನುಗ್ರಹದಿಂದ ಪದ್ಮಗಂಧೆಯಾಗುತ್ತಾಳೆ. ಆಕಸ್ಮಿಕವಾಗಿ ಪದ್ಮಗಂಧೆಯನ್ನು ಕಂಡು ಹಸ್ತಿನಾಪುರದ ರಾಜ ಶಂತನು ಅವಳ ಸೌಂದರ್ಯಕ್ಕೆ ಮಾರುಹೋಗಿ ಅವಳನ್ನು ಮದುವೆಯಾಗುವ ಹಂಬಲವನ್ನು ವ್ಯಕ್ತಪಡಿಸುತ್ತಾನೆ. ಆದರೆ ದಾಶರಾಜ ಮಗಳ ಮೇಲಿನ ಪ್ರೀತಿ ಹಾಗೂ ಅವಳ ಭವಿಷ್ಯಕ್ಕಾಗಿ, ತನ್ನ ಮಗಳು ಹಸ್ತಿನಾಪುರದ ರಾಣಿಯಾಗಬೇಕೆಂದೂ ಭವಿಷ್ಯದಲ್ಲಿ ಪದ್ಮಗಂಧೆಯಲ್ಲಿ ಶಂತನು ರಾಜನಿಗೆ ಹುಟ್ಟುವ ಮಗನೆ ಹಸ್ತಿನಾಪುರದ ರಾಜನಾಗುತ್ತಾನೆ ಎಂಬ ಷರತ್ತಿಗೆ ಒಪ್ಪುವುದಾದರೆ ಪದ್ಮಗಂಧೆಯನ್ನು ಅವನಿಗೆ ಕೊಡುವುದಾಗಿ ಹೇಳುತ್ತಾನೆ. ಈ ಮಾತಿಗೆ ಒಪ್ಪಿದ ಶಂತನು ಪದ್ಮಗಂಧೆಯ ಮೇಲಿನ ಪ್ರೀತಿಗಿಂತಲೂ ಮಗನ ಮೇಲಿನ ಮಮಕಾರವೇ ಮಿಗಿಲು ಎಂದು ಭಾವಿಸಿ ಪದ್ಮಗಂಧೆಯನ್ನು ತ್ಯಜಿಸಿ ಹೊರಡುತ್ತಾನೆ.
ಇತ್ತ ದೇವವ್ರತ ತಂದೆಯ ಇಷ್ಟಾರ್ಥ ಪೂರೈಕೆಗಾಗಿ ಜೊತೆಗೆ ತಾಯಿಯನ್ನು ಪಡೆಯುವ ಹಂಬಲದಿಂದ ಗಂಗಾಮಾತೆ ಕೊಟ್ಟ ಮಣಿಖಚಿತವಾದ ಶಂಖದ ಬಳೆಗಳನ್ನು ತೆಗೆದುಕೊಂಡು ದಾಸಪುರಕ್ಕೆ ಬರುತ್ತಾನೆ. ಬಳೆಗಳು ಪದ್ಮಗಂಧೆಗೆ ಸರಿಯಾಗಿ ಒಪ್ಪುವುದನ್ನು ಕಂಡ ದೇವವ್ರತ ತಾಯಿ ಸಿಕ್ಕಳೆಂಬ ಸಂಭ್ರಮದಲ್ಲಿ ಇದ್ದರೆ ಪದ್ಮಗಂಧಿ ಅತನಲ್ಲಿ ಮಗನನ್ನು ಕಾಣುತ್ತಾಳೆ. ದಾಶರಾಜನ ಬಯಕೆಯಂತೆ ದೇವವ್ರತನು ಸಿಂಹಾಸನವನ್ನು ತ್ಯಜಿಸುವುದಾಗಿ ಹಾಗೂ ಮುಂದಿನ ಜೀವನದಲ್ಲಿ ಅಖಂಡ ಬ್ರಹ್ಮಚರ್ಯರನ್ನು ಪಾಲಿಸುವುದಾಗಿ ಪ್ರಮಾಣ ಮಾಡುತ್ತಾನೆ. ಹೀಗೆ ದಾಶರಾಜನ ಅನುಮತಿಯೊಂದಿಗೆ ಪದ್ಮಗಂಧಿಯನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಹೋಗುತ್ತಾನೆ. ಬಹಳ ದಿನಗಳಿಂದ ಕಾಣದಿದ್ದ ದೇವವ್ರತನನ್ನು ಕಂಡ ರಾಜ ಶಂತನು ಸಂತೋಷಪಡುತ್ತಾನೆ. ದೇವವ್ರತ ಪದ್ಮಗಂಧೆಯನ್ನು ಶಂತನುವಿಗೆ ಅರ್ಪಿಸಿದಾಗ ಶಂತನು ದಿಗ್ಬ್ರಮೆಗೊಳ್ಳುತ್ತಾನೆ. ಈ ಎಲ್ಲಾ ಗೊಂದಲವು ಕೊನೆಗೆ ಕೇಳಿ ಬರುವ ದೇವವಾಣಿಯಿಂದ ಬಗೆಹರಿಯುತ್ತದೆ. ಬಿರುಸಾದ ಪ್ರತಿಜ್ಞೆಗಾಗಿ ದೇವವ್ರತ ಭೀಷ್ಮದೇವನೆಂದೂ, ಸತ್ಯವನ್ನು ಅರಿತವಳಾದ್ದರಿಂದ ಪದ್ಮಗಂಧೆ ಸತ್ಯವತಿಯೆಂದೂ ಹೆಸರನ್ನು ಪಡೆಯುತ್ತಾರೆ.
ಪ್ರೀತಿ ಮತ್ತು ವಾತ್ಸಲ್ಯಗಳ ಸೆಳೆತಕ್ಕೆ ಸಿಕ್ಕುಬೀಳುವ ಹೆಣ್ಣಿನ ತಳಮಳಗಳನ್ನು ಪ್ರಯೋಗ ವಿನ್ಯಾಸದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.

ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು
2015-೧೬

ರಚನೆ
ಯುಮ್‍ನಾಮ್ ರಾಜೇಂದ್ರ ಸಿಂಗ್

ಇಂಗ್ಲೀಷ್ ಅನುವಾದ
ಹೈಸ್ನಾಮ್ ನೋರೆನ್ ಸಿಂಗ್

ಕನ್ನಡ ಅನುವಾದ
ಬಿ.ಆರ್. ವೆಂಕಟರಮಣ ಐತಾಳ ಮತ್ತು ನೇಹಾ ಶಿಶಿರ

ವಿನ್ಯಾಸ ಮತ್ತು ನಿರ್ದೇಶನ
ಹೈಸ್ನಾಮ್ ತೋಂಬ, ಮಣಿಪುರ

ಪಾತ್ರವರ್ಗ
ದೇವವ್ರತ/ಭೀಷ್ಮ – ಅರಣ್ಯಸಾಗರ್ ವಿ.
ಶಂತನು ಮಹಾರಾಜ – ಸಂದೇಶ್ ಹೆಚ್. ಆರ್.
ದಾಶರಾಜ – ಶ್ರೀನಿವಾಸಮೂರ್ತಿ ಜಿ. ಆರ್.
ಗಂಗಾದೇವಿ – ಪಯಸ್ವಿನಿ ಬಿ. ಎಸ್.
ಮತ್ಸ್ಯಗಂಧಾ – ಛಾಯಾ ಎಂ. ಎಸ್.
ಪದ್ಮಗಂಧಾ – ಸುನೀಲಾ
ಮೀನು – ಕಾಜೋಲ್ ಚಿನ್ನಾಪುರ್
ಜೀವಧಾತು – ಪ್ರತಿಭಾ ಬಿ. ಜಿ.
ಉಪರಿಚರ ಮಹಾರಾಜ – ಮಂಜಪ್ಪ ಹುಲಗಿ
ಪರಿಚಾರಕ – ಗಂಗಪ್ಪ ಪಾಟೀಲ್
ವ್ಯಾಸದೇವ – ಶಿವರಾಜ್ ಕೆ.
ಪರಾಶರ – ಶ್ರೀಹರ್ಷ ಜಿ.
ನಾಗರಿಕರು – ಶ್ರೀನಿಧಿ ಆಚಾರ್, ನವೀನ್ ಕುಮಾರ್ ಜಿ.ಜೆ., ಪ್ರಸನ್ನ ಜಿ. ವಿ., ರಿತೇಶ್ ಕುಮಾರ್ ಆರ್., ಸಂತೋಷ್ ಟೋನಪೆ, ಪೀರಪ್ಪ,
ಸದಾಶಿವ ಯಕ್ಕುಂಡಿಮಠ

ತಾಂತ್ರಿಕ ವರ್ಗ
ರಂಗ ನಿರ್ವಹಣೆ
ನವೀನ್ ಕುಮಾರ್ ಜಿ. ಜೆ.

ರಂಗ ಸಜ್ಜಿಕೆ
ರಿತೇಶ್ ಕುಮಾರ್ ಆರ್.
ಶಿವರಾಜ್ ಕೆ.

ಸಂಗೀತ
ಸದಾಶಿವ ಎಕ್ಕುಂಡಿಮಠ
ಶ್ರೀ ಹರ್ಷ ಜಿ.

ಬೆಳಕು
ಶ್ರೀನಿಧಿ ಆಚಾರ್
ಸಂತೋಷ್ ಟೋನಪೆ
ಪೀರಪ್ಪ

ವಸ್ತ್ರ ಮತ್ತು ಪರಿಕರ
ಪ್ರಸನ್ನ ಜಿ.ವಿ.
ಮಂಜಪ್ಪ ಹುಲಗಿ

ರಂಗ ವಿನ್ಯಾಸ
ಮಂಜು ಕೊಡಗು

ಸಂಗೀತ ಸಂಯೋಜನೆ ಮತ್ತು ನಿರ್ವಹಣೆ
ಅರುಣಕುಮಾರ ಎಂ.
ಎಂ.ಪಿ. ಹೆಗಡೆ

ವಸ್ತ್ರವಿನ್ಯಾಸ
ಫಣಿಯಮ್ಮ ಹೆಚ್.ಎಸ್.

ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ
ಕೃಷ್ಣಮೂರ್ತಿ ಎಂ.ಎಂ.
ಸೂರಜ್ ಬಿ.ಆರ್.

ಕೃತಜ್ಞತೆಗಳು
ನೀನಾಸಮ್
ನೀನಾಸಮ್ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು, ಸಿಬ್ಬಂದಿವರ್ಗ
ಶ್ರೀಮತಿ ಸುಶೀಲಾ ಹೆಗಡೆ, ರಮೇಶ ಪಿ. ಕೆ.
ಕಲಾಕ್ಷೇತ್ರ, ಮಣಿಪುರ

Leave a Reply