ತೊಡೆದೇವು..!

ತೊಡೆದೇವು..!
ಪಾತ್ರೆಯ ಒಳಭಾಗದಲ್ಲಿ ಅಡುಗೆ ತಯಾರಿಸುವುದು ನಮಗೆಲ್ಲಾ ತಿಳಿದೇ ಇದೆ. ಆದರೆ ಪಾತ್ರೆಯ ಹೊರಭಾಗದಿಂದ ಅಟ್ಟುವ ವಿಧಾನ ಗೊತ್ತೆ ? ಒಂದು ಬಗೆಯ ತಿನಿಸು ತಯಾರಿಸಲು ಪಾತ್ರೆಯ ಹೊರಭಾಗವೇ ಮುಖ್ಯವಾಗುತ್ತದೆ..! ಅದು ಮಲೆನಾಡು ಭಾಗದಲ್ಲಿ ತಯಾರಿಸುವ ತೊಡೆದೇವು. ಮಂದಿಗೆ, ಆವುಗೆ ಎಂದೆಲ್ಲಾ ಹೆಸರಿಸುವ ಈ ಸಿಹಿ ತಿಂಡಿಗೆ ಕಬ್ಬಿಣ ಹಾಲು ಮತ್ತು ಅಕ್ಕಿ ಬಳಕೆಯಾಗುತ್ತದೆ. ವಿಶಿಷ್ಟ ರುಚಿಯಲ್ಲದೇ, ಅತ್ಯಂತ ತೆಳುವಾಗಿಯೂ ಗರಿಗರಿಯಾಗಿಯೂ ಇರುವುದು ಇದರ ವಿಶೇಷ. ತೊಡೆದೇವು ಮಾಡುವ ಗಡಿಗೆ ಬಾಣಲೆಯ ಆಕಾರದಲ್ಲಿದ್ದು, ಕಂಠ ಭಾಗದಲ್ಲಿ ಚೌಕಾಕಾರದಲ್ಲಿ ಕೊರೆದ ರಂಧ್ರವಿರುತ್ತದೆ. ಇದನ್ನು ಒಲೆಯ ಮೇಲೆ ಬೋರಲು ಹಾಕಿ, ಹದವಾಗಿ ಎಣ್ಣೆ ಬಳಿಯಬೇಕು. ವಿಶೇಷ ರೀತಿಯಲ್ಲಿ ತಯಾರಿಸಿದ ಹಿಟ್ಟಿಗೆ (ದೋಸೆ ಹಿಟ್ಟಿನ ಹದ ) ಅಂಗೈ ಅಗಲದ ಬಟ್ಟೆ (ಚಿಕ್ಕ ಕೋಲಿಗೆ ಸುತ್ತಿ ತಯಾರಿಸಿದ್ದು) ಅಡ್ಡಿ ಪ್ಲಸ್ ಆಕಾರದಲ್ಲಿ ಬಳಿಯಬೇಕು. ಬೆಂದು ಕೆಂಪು ಬಣ್ಣಕ್ಕೆ ತಿರುಗಿದಾಗ ಹಳೆ ಕುಂಟು (ಅಡಿಕೆ ಹಳೆಯಚೂರು ) ಬಳಸಿ ಗಡಿಗೆಯಿಂದ ಬಿಡಿಸಿ ತ್ರಿಕೋನಾಕಾರದಲ್ಲಿ ಮಡಚಿದರೆ ತೊಡೆದೇವು ಸಿದ್ಧ. ತುಪ್ಪ ಅಥವಾ ಹಾಲು ಹಾಕಿಕೊಂಡು ತಿಂದರೆ ಅದ್ಭುತ ರುಚಿ.
ಹೊಸ್ಮನೆ ಮುತ್ತು

Leave a Reply